ಎಟಿಎಂನಲ್ಲಿ ಹಣ ವಿತ್ ಡ್ರಾ ಮಿತಿ ಅಂತ್ಯ

ನೋಟು ನಿಷೇಧದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಹಣ ವಿತ್ ಡ್ರಾಗೆ ಹೇರಿದ್ದ ಮಿತಿಯನ್ನು ಫೆ.1 ರಿಂದ ವಾಪಸ್ ಪಡೆದಿದೆ.
ಫೆ.1 ರಿಂದ ಎಟಿಎಂನಲ್ಲಿ ಹಣ ವಿತ್ ಡ್ರಾ ಮಿತಿ ಇಲ್ಲ
ಫೆ.1 ರಿಂದ ಎಟಿಎಂನಲ್ಲಿ ಹಣ ವಿತ್ ಡ್ರಾ ಮಿತಿ ಇಲ್ಲ
ನವದೆಹಲಿ: ನೋಟು ನಿಷೇಧದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಹಣ ವಿತ್ ಡ್ರಾಗೆ ಹೇರಿದ್ದ ಮಿತಿಯನ್ನು ಫೆ.1 ರಿಂದ ವಾಪಸ್ ಪಡೆದಿದೆ. 
ಇನ್ನು ಕರೆಂಟ್ ಅಕೌಂಟ್, ಕ್ಯಾಶ್ ಕ್ರೆಡಿಟ್ ಅಕೌಂಟ್ ಅಥವಾ ಓವರ್ ಡ್ರಾಫ್ಟ್ ಮೇಲೆ ವಿಧಿಸಲಾಗಿದ್ದ ಮಿತಿ ಜ.30 ರಿಂದಲೇ ರದ್ದಾಗಿದ್ದು, ಉಳಿತಾಯ ಖಾತೆಯ ದಿನಕ್ಕೆ 24 ಸಾವಿರ ರುಪಾಯಿ ಹಣ ಡ್ರಾ ಮಾಡುವ ಮಿತಿಯನ್ನು ಫೆ. 1 ರಿಂದ ವಾಪಸ್ ಪಡೆಯಲಾಗಿದೆ. 
ಫೆಬ್ರವರಿ 1 ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಯಾವುದೇ ರೀತಿಯ ಮಿತಿ ಇಲ್ಲ. ಒಂದು ವೇಳೆ ಆಯಾ ಬ್ಯಾಂಕ್ ಗಳು ಬಯಸಿದರೆ ಮಿತಿ ಹಾಕಬಹುದು ಎಂದು ಆರ್‌ಬಿಐ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com