ಇನ್ನು ಮುಂದೆ ರೈಲಿಗೂ ಬರಲಿದೆ ಎಕಾನಮಿ ಬೋಗಿ

ವಿಮಾನದಲ್ಲಿದ್ದ ಎಕಾನಮಿ ದರ್ಜೆ ಪರಿಕಲ್ಪನೆ ಇನ್ನು ಮುಂದೆ ರೈಲಿನಲ್ಲಿಯೂ ಜಾರಿಗೆ ಬರಲಿದೆ. ರೈಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವಿಮಾನದಲ್ಲಿದ್ದ ಎಕಾನಮಿ ದರ್ಜೆ ಪರಿಕಲ್ಪನೆ ಇನ್ನು ಮುಂದೆ ರೈಲಿನಲ್ಲಿಯೂ ಜಾರಿಗೆ ಬರಲಿದೆ. ರೈಲು ಪ್ರಯಾಣಿಕರಿಗೆ ಕೂಡ ಎಕಾನಮಿ ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣ ಮಾಡುವ ಸೌಭಾಗ್ಯ ಸಿಗಲಿದ್ದು, ಸಾಮಾನ್ಯ 3 ಎಸಿ ದರಕ್ಕಿಂತ ಇದರಲ್ಲಿ ಟಿಕೆಟ್ ದರ ಕಡಿಮೆಯಿರಲಿದೆ.
ಉದ್ದೇಶಿತ, ಸಂಪೂರ್ಣ ಎಸಿ ರೈಲಿನಲ್ಲಿ ಮೂರು-ಹಂತದ ಎಕಾನಮಿ AC ಬೋಗಿಗಳು, ಎಸಿ-3, ಎಸಿ-2 ಮತ್ತು ಎಸಿ-1 ದರ್ಜೆಯ ಬೋಗಿಗಳು ಕೂಡ ಇರುತ್ತವೆ. ಸ್ವಯಂಚಾಲಿತ ಬಾಗಿಲುಗಳನ್ನು ಕೂಡ ಹೊಂದಿರುತ್ತವೆ. 
ಪ್ರಯಾಣಿಕರಿಗೆ ಎಕಾನಮಿ ಎಸಿ ಬೋಗಿಗಳಲ್ಲಿ ಪ್ರಯಾಣಿಸುವಾಗ ಹೊದಿಕೆಯ ಅಗತ್ಯವಿರುವುದಿಲ್ಲ. ಇತರ ಎಸಿ ಬೋಗಿಗಳಂತೆ ಇಲ್ಲಿ ಕೂಡ ಉಷ್ಣತೆ 24ರಿಂದ 25 ಡಿಗ್ರಿ ಸೆಲ್ಸಿಯಸ್ ಗಳಷ್ಟಿರುತ್ತದೆ.
ಪ್ರಸ್ತುತ ಮೈಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ ಸ್ಲೀಪರ್, ಥರ್ಡ್ ಎಸಿ, ಸೆಕೆಂಡ್ ಎಸಿ ಮತ್ತು ಮೊದಲ ಎಸಿ ದರ್ಜೆಯ ಬೋಗಿಗಳಿದ್ದರೆ, ರಾಜಧಾನಿ,ಶತಾಬ್ದಿ ಮತ್ತ ಇತ್ತೀಚೆಗೆ ಜಾರಿಗೆ ಬಂದ ಹಮ್ಸಫರ್ ಮತ್ತು ತೇಜಸ್ ರೈಲುಗಳಲ್ಲಿ ಸಂಪೂರ್ಣ ಹವಾ ನಿಯಂತ್ರಿತ ಬೋಗಿಗಳು ಇವೆ.
ಅತಿ ಹೆಚ್ಚಿನ ಪ್ರಯಾಣಿಕರಿಗೆ ಎಸಿ ರೈಲುಗಳಲ್ಲಿ ಪ್ರಯಾಣಿಸುವ ಸೌಲಭ್ಯಗಳನ್ನು ನೀಡಿ ಹಿತಕರ ವಾತಾವರಣ ಮೂಡಿಸಲು ಆಯ್ದ ಮಾರ್ಗಗಳಲ್ಲಿ ಸಂಪೂರ್ಣ ಎಸಿ ರೈಲುಗಳನ್ನು ಜಾರಿಗೆ ತರಲು ರೈಲ್ವೆ ಇಲಾಖೆ ಚಿಂತಿಸುತ್ತಿದೆ.
 ರೈಲುಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ಈಗಿರುವ ವ್ಯವಸ್ಥೆಗಳನ್ನು ಉನ್ನತ ದರ್ಜೆಗೇರಿಸಿ ಸೇವೆಗಳಲ್ಲಿ ಸುಧಾರಣೆ ತರಲು ರೈಲ್ವೆ ಇಲಾಖೆ ಪ್ರತ್ಯೇಕ ಕೋಶವನ್ನು ರಚಿಸಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ಆರಂಭಗೊಂಡ ಹಮ್ಸಫರ್ ಎಕ್ಸ್ ಪ್ರೆಸ್ 3-ಎಸಿ ಬೋಗಿಗಳನ್ನು ಹೊಂದಿದ್ದು ಪ್ರಖ್ಯಾತವಾಗಿದೆ. ಎಕಾನಮಿ ಎಸಿ ಬೋಗಿಗಳನ್ನೊಳಗೊಂಡ ಸಂಪೂರ್ಣ ಹವಾನಿಯಂತ್ರಿತ ಎಸಿ ರೈಲುಗಳು ಪ್ರಯಾಣಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com