ಮುಸ್ಲಿಂ ಬಾಲಕನ ಹತ್ಯೆ ಪ್ರಕರಣ: ಆರೋಪಿಗಳ ಪತ್ತೆಗೆ 2 ಲಕ್ಷ ಬಹುಮಾನ ಘೋಷಿಸಿದ ಹರಿಯಾಣ ಪೊಲೀಸರು

ಹರಿಯಾಣದ ಬಲ್ಲಾಬ್ ಗಢ ಸಮೀಪ ರೈಲೊಂದರಲ್ಲಿ 15 ವರ್ಷದ ಮುಸ್ಲಿಂ ಬಾಲಕ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಚಂಡಿಗಢ: ಹರಿಯಾಣದ ಬಲ್ಲಾಬ್ ಗಢ ಸಮೀಪ ರೈಲೊಂದರಲ್ಲಿ 15 ವರ್ಷದ ಮುಸ್ಲಿಂ ಬಾಲಕ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರ ಬಗ್ಗೆ ಮಾಹಿತಿ ನೀಡಿದರೆ ಎರಡು ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಸೋಮವಾರ ಹರಿಯಾಣ ಪೊಲೀಸರು ಘೋಷಿಸಿದ್ದಾರೆ.
ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಅದನ್ನು ರೈಲ್ವೆ ಪೊಲೀಸರ ಗಮಕ್ಕೆ ತನ್ನಿ ಫರಿದಾಬಾದ್ ರೈಲ್ವೆ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ಸಹಕರಿಸುವವರಿಗೆ ಎರಡು ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಮಾಹಿತಿ ನೀಡುವ ವ್ಯಕ್ತಿಗಳ ಕುರಿತು ಗೌಪ್ಯತೆ ಕಾಪಾಡಾಲುವುದು ಎಂದಿದ್ದಾರೆ.
ಕಳೆದ ಜೂನ್ 22ರಂದು ದೆಹಲಿ-ಮಥುರಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 17 ವರ್ಷದ ಮುಸ್ಲಿಂ ಬಾಲಕ ಜುನೈದ್ ಖಾನ್ ನನ್ನು ಚಾಕುವಿನಿಂದ ಇರಿದು ಕೊಲ್ಲಲಾಯಿತು. ಚಾಕುವಿನಿಂದ ಇರಿಯುವ ಮೊದಲು ಜುನೈದ್‌ನನ್ನು ‘ಗೋಮಾಂಸ ತಿನ್ನುವವ’ ಎಂದು ನಿಂದಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com