ನವದೆಹಲಿ: ಭಯೋತ್ಪದಾನೆಯನ್ನು ಮಟ್ಟಹಾಕುವ ಸಂಬಂಧ ಪರಸ್ಪರ ಸಹಕಾರ ಹಾಗೂ ಆರ್ಥಿಕ ಸಂಬಂಧ ವೃದ್ದಿಗೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಚರ್ಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.
ಇಸ್ರೇಲ್ ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಮೋದಿ ಪ್ರವಾಸಕ್ಕು ಮುನ್ನ ಟ್ವೀಟ್ ಮಾಡಿದ್ದು, ಉಭಯ ದೇಶಗಳ ನಡುವಿನ ಪರಸ್ಪರ ಲಾಭದಾಯಕ ಎನಿಸುವ ವ್ಯಾಪಕ ವಿಷಯಗಳ ಕುರಿತು ಆಳವಾದ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಭದ್ರತೆ ಮತ್ತು ಸಾರ್ವಭೌಮತೆಯ ವಿಷಯದಲ್ಲಿ ಎಂಟೆದೆಯ ರಾಷ್ಟ್ರವೆಂದೇ ಖ್ಯಾತಿ ಪಡೆದಿರುವ ಇಸ್ರೇಲ್ ಜತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆಯಿಂದ ಮೂರು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಪ್ರಯಾಣ ಬೆಳೆಸಿದ್ದಾರೆ.
ಭಯೋತ್ಪಾದನೆಯಂತಹ ಸಮಾನ ಹಾಗೂ ಪ್ರಮುಖ ಭದ್ರತಾ ಸವಾಲುಗಳನ್ನು ನಿಭಾಯಿಸುವ ಬಗ್ಗೆಯೂ ನಾವು ಚರ್ಚಿಸಲಿದ್ದೇವೆ ದು ಮೋದಿ ತಿಳಿಸಿದ್ದಾರೆ.
ಈ ಅಭೂತಪೂರ್ವ ಭೇಟಿಯನ್ನು ಕಾತರದಿಂದ ಎದುರು ನೋಡುತ್ತಿರುವ ನಾನು, ಈ ಭೇಟಿ ಉಭಯ ದೇಶಗಳನ್ನು ಹಾಗೂ ಅವುಗಳ ಜನರನ್ನು ಇನ್ನಷ್ಟು ಸನಿಹಕ್ಕೆ ತರುವಂತಾಗಲೆಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.