ಜಿಎಸ್ ಟಿ: ಸಿಗರೇಟ್ ಮೇಲಿನ ತೆರಿಗೆಯನ್ನು ಇಳಿಸಿದ ಕೇಂದ್ರ

ಜಿಎಸ್ ಟಿ ಅಡಿಯಲ್ಲಿ ಸಿಗರೇಟ್ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.
ಸಿಗರೇಟ್
ಸಿಗರೇಟ್
ಚೆನ್ನೈ: ಜಿಎಸ್ ಟಿ ಅಡಿಯಲ್ಲಿ ಸಿಗರೇಟ್ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. 
ಕೇಂದ್ರ ಸರ್ಕಾರದ ನಿರ್ಧಾರದಿಂದ ಸಿಗರೇಟ್ ಮೇಲಿನ ಒಟ್ಟಾರೆ ತೆರಿಗೆಯಲ್ಲಿ ಶೇ.7-9 ರಷ್ಟು ಇಳಿಕೆಯಾಗಲಿರುವ ಸಾಧ್ಯತೆ ಇದ್ದು, ಭಾರತದ ಸಿಗರೇಟ್ ಉತ್ಪಾದಕ ಐಟಿಸಿಯ ಷೇರುಗಳು ದಾಖಲೆಯ ರೂ.353.20 ಕ್ಕೆ ಏರಿಕೆಯಾಗಿವೆ. ಇನ್ನು ಉಳಿದ ಸಿಗರೇಟ್ ಉತ್ಪಾದಕ ಸಂಸ್ಥೆಗಳಾಗಿರುವ ಗಾಡ್ಫ್ರೇ ಫಿಲಿಪ್ಸ್ ಇಂಡಿಯಾ ಹಾಗೂ ವಿಎಸ್ಟಿ ಇಂಡಸ್ಟ್ರೀಸ್ ಷೇರುಗಳು ಅನುಕ್ರಮವಾಗಿ ಶೇ.3.4 ಹಾಗೂ ಶೇ.4.4 ರಷ್ಟು ಏರಿಕೆಯಾಗಿವೆ. 
ಜಿಎಸ್ ಟಿ ಅಡಿಯಲ್ಲಿ ಸಿಗರೇಟ್ ಗಳನ್ನು ಗರಿಷ್ಠ ತೆರಿಗೆ ಸ್ಲ್ಯಾಬ್ ಅಂದರೆ ಶೇ.28 ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಬರಲಿದೆ.  ಜಿಎಸ್ ಟಿ ಅಡಿಯಲ್ಲಿ ಸಿಗರೇಟ್ ಗಳ ಅಂತಿಮ ತೆರಿಗೆ ಎಷ್ಟಾಗಲಿದೆ ಎಂಬ ಗೊಂದಲಕ್ಕೆ ತೆರೆಬಿದ್ದಿದ್ದು, ಹೆಚ್ಚುವರಿ ಅಬಕಾರಿ ಸುಂಕ, ಮೂಲಭೂತ ಅಬಕಾರಿ ಸುಂಕವನ್ನು ವಿಧಿಸಲಾಗುವುದಿಲ್ಲ ಎಂದು ಅಬಕಾರಿ ಇಲಾಖೆ ಈಗ ಸ್ಪಷ್ಟಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com