ಜಿಎಸ್‏ಟಿ ಗೆ ಸಂಬಂಧಪಟ್ಟ ಎಂಆರ್‏ಪಿ ನಿಯಮಗಳು, ತಪ್ಪದೇ ಓದಿ...!

ದೇಶಾದ್ಯಂತ ಜುಲೈ 1ರಿಂದಲೇ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾಗಿದ್ದು ಜಿಎಸ್‍ಟಿ ಸಂಬಂಧ ಕೆಲ ನಿಯಮಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ...
ದಾಸ್ತಾನು ಮಳಿಗೆ
ದಾಸ್ತಾನು ಮಳಿಗೆ
ನವದೆಹಲಿ: ದೇಶಾದ್ಯಂತ ಜುಲೈ 1ರಿಂದಲೇ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾಗಿದ್ದು ಜಿಎಸ್‍ಟಿ ಸಂಬಂಧ ಕೆಲ ನಿಯಮಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಜಿಎಸ್‍ಟಿ ಅಡಿಯಲ್ಲಿ ಸರಕುಗಳ ಬೆಲೆ ಮೇಲೆ ಯಾವ ರೀತಿ ವ್ಯತ್ಯಾಸಗಳಾಗುತ್ತದೆ ಎಂಬ ಗೊಂದಲದಲ್ಲಿ ಮಾರಾಟಗಾರರು ಮತ್ತು ಗ್ರಾಹಕರು ಸಿಲುಕಿದ್ದರು. ಈ ಸಂಬಂಧ ಗೊಂದಲ ನಿವಾರಣೆಗೆ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಅಂತೆ ಇಂದು ಕೆಲ ನಿಯಮಗಳನ್ನು ಸಮಿತಿ ಸೂಚಿಸಿದೆ. 
ಮಾರಾಟವಾಗದೆ ಉಳಿದಿರುವ ದಾಸ್ತಾನಿನ ಮೇಲೆ ಜಿಎಸ್‍ಟಿ ಜಾರಿ ಹಿನ್ನೆಲೆ ಬೆಲೆಯಲ್ಲಿ ವ್ಯತ್ಯಾಸವಾಗಿದ್ದರೆ ಅಂತಹ ಉತ್ಪನ್ನಗಳ ಮೇಲೆ ಉತ್ಪಾದಕರು/ಆಮದುದಾರ/ಪ್ಯಾಕರ್ ಹಳೆ ಬೆಲೆ ಮತ್ತು ನೂತನ ಜಿಎಸ್‍ಟಿ ದರದ ಮಾಹಿತಿಯನ್ನು ಮುದ್ರಿಸಿಬೇಕು ಅಂತೆ ಈ ಬಗ್ಗೆ ಕಡ್ಡಾಯವಾಗಿ ಎರಡು ಪತ್ರಿಕೆಗಳಲ್ಲಿ ಜಾಹಿರಾತು ನೀಡಬೇಕು ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಇಲಾಖೆ ಅವಿನಾಶ್ ಶ್ರೀವಾತ್ಸವ್ ತಿಳಿಸಿದ್ದಾರೆ. 
ಈ ನಿಯಮದಡಿ ಮಾರಾಟವಾಗದೆ ಉಳಿದಿರುವ ದಾಸ್ತಾನಿನ ಮಾರಾಟಕ್ಕೆ ಕೇಂದ್ರ ಸರ್ಕಾರ ಮೂರು ತಿಂಗಳ ಗಡುವು ನೀಡಿದ್ದು ಸೆಪ್ಟೆಂಬರ್ ಹೊತ್ತಿಗೆ ಮಾರಾಟ ಮಾಡಲು ಅವಕಾಶ ನೀಡಿದೆ. ಈ ಹೊಸ ನಿಯಮಗಳನ್ನು ಉಲ್ಲಂಘಿಸಿದ ಸಂಸ್ಥೆಗಳ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ. 
ಜಿಎಸ್ಟಿ ಜಾರಿಯಿಂದ ಉತ್ಪನ್ನಗಳ ಮೇಲಿನ ದರವನ್ನು ವರ್ತಕರೆ ನಿಗದಿಪಡಿಸುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳುತ್ತಿದೆ. ಇದನ್ನು ಸರಿಪಡಿಸಲು ಜಿಎಸ್ಟಿ ದರ ಪರಿಶೀಲನಾ ಸಮಿತಿ ರಚಿಸಲಾಗಿದ್ದು 15 ವಿಭಾಗದಲ್ಲಿ ಕೇಂದ್ರ ಮೇಲ್ವಿಚಾರಣೆ ಸಮಿತಿ ಕಾರ್ಯನಿರ್ವಹಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com