ಸಾಂದರ್ಭಿಕ ಚಿತ್ರ
ದೇಶ
ಜೆಎಸ್ ಟಿ ಎಫೆಕ್ಟ್: ಎಲ್ ಪಿಜಿ ಬೆಲೆ 32 ರು.ವರೆಗೆ ಏರಿಕೆ, ಕಳೆದ 6 ವರ್ಷಗಳಲ್ಲೇ ಅತಿ ಹೆಚ್ಚು
ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜೆಎಸ್ ಟಿ) ಜಾರಿಗೊಂಡ ನಂತರ ಕೇಂದ್ರ ಸರ್ಕಾರ ಸಬ್ಸಿಡಿ ಸಹಿತ ಗೃಹ ಬಳಕೆ ಅಡುಗೆ....
ನವದೆಹಲಿ: ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜೆಎಸ್ ಟಿ) ಜಾರಿಗೊಂಡ ನಂತರ ಕೇಂದ್ರ ಸರ್ಕಾರ ಸಬ್ಸಿಡಿ ಸಹಿತ ಗೃಹ ಬಳಕೆ ಅಡುಗೆ ಅನಿಲ(ಎಲ್ ಪಿಜಿ)ದ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 30 ರುಪಾಯಿ ವರೆಗೆ ಏರಿಕೆ ಮಾಡಿದ್ದು, ಇದು ಕಳೆದ ಆರು ವರ್ಷಗಳಲ್ಲೇ ಅತಿ ಹೆಚ್ಚು ಬೆಲೆ ಏರಿಕೆಯಾಗಿದೆ.
ದೆಹಲಿಯಲ್ಲಿ 446.65 ರುಪಾಯಿ ಇದ್ದ ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಜುಲೈ 1ರಿಂದ 477.46 ರುಪಾಯಿಗೆ ಏರಿಕೆ ಮಾಡಲಾಗಿದೆ.
ತೈಲ ಕಂಪನಿಗಳಿಂದ ದೊರೆತ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಗೆ 31.67 ರುಪಾಯಿ, ಕೋಲ್ಕತಾದಲ್ಲಿ 31.67 ರುಪಾಯಿ, ಚೆನ್ನೈನಲ್ಲಿ 31.41ರುಪಾಯಿ ಏರಿಕೆ ಮಾಡಲಾಗಿದೆ.
ರಾಜ್ಯಗಳಲ್ಲಿ ಜಾರಿ ಇರುವ ತೆರಿಗೆಗೆ ಅನುಗುಣವಾಗಿ ದರದಲ್ಲಿ ಹೆಚ್ಚಳ ಆಗಲಿದೆ. ಇದು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಲಿದೆ.
ಜೂನ್ 25, 2011ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರತಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 50 ರುಪಾಯಿ ಏರಿಕೆ ಮಾಡಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ