ಹೊಸ ಮರ್ಸಿಡಿಸ್ ಕಾರು ಬೇಡ, ಹಳೆಯದ್ದೇ ಸಾಕು ಎಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ಮೇಲೆ ಸದಾ ಒಂದಲ್ಲೊಂದು...
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್
ಲಕ್ನೊ: ಉತ್ತರ ಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ಮೇಲೆ ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಾರೆ. 
ಈ ಬಾರಿ ಅವರು ಸುದ್ದಿಯಾಗಿರುವುದು ಕಾರು ಖರೀದಿ ವಿಷಯದಲ್ಲಿ. ಅವರ ಓಡಾಟಕ್ಕೆ ಹೊಸ ಬ್ರಾಂಡ್ ಮರ್ಸಿಡಿಸ್ ಎಸ್ ಯುವಿ ಕಾರುಗಳನ್ನು ಖರೀದಿಸುವಂತೆ ಕಚೇರಿ ಸಿಬ್ಬಂದಿ ಸಲ್ಲಿಸಿದ್ದ ಪ್ರಸ್ತಾವನೆಗೆ ಅವರು ನೋ ಎಂದಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ವಸತಿ ಇಲಾಖೆ ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಯವರ ಮುಂದಿಟ್ಟಿತ್ತು. ಸುಮಾರು 3.5  ಕೋಟಿ ರೂಪಾಯಿ ಮೌಲ್ಯದ ಕಾರು ಖರೀದಿಸುವಂತೆ ಸೂಚಿಸಿತ್ತು. ಆದರೆ ಆ ಪ್ರಸ್ತಾವನೆಯನ್ನು ಮುಖ್ಯಮಂತ್ರಿಯವರು ತಕ್ಷಣವೇ ತಳ್ಳಿ ಹಾಕಿದ್ದಾರೆ.
ಹಿಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬಳಸುತ್ತಿದ್ದ ಕಾರನ್ನೇ ತಾವು ಬಳಸುವುದಾಗಿ ಅವರು ಹೇಳಿದ್ದಾರೆ. ಅದು ಕೂಡ ಮರ್ಸಿಡಿಸ್ ಕಾರೇ ಆಗಿದೆ. ಈ ಮೂಲಕ ಅವರು ಕಾರು ಬಳಕೆ ವಿಚಾರದಲ್ಲಿ ಹಿಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರ ಹಾದಿಯನ್ನು ತುಳಿಯುತ್ತಿದ್ದಾರೆ.
ಆದರೆ ತಮ್ಮ ಸಂಪುಟ ಸದಸ್ಯರಿಗೆ ಮುಖ್ಯಮಂತ್ರಿಯವರು ಇನ್ನೊವಾ ಕಾರಿಗೆ ಬದಲಾಗಿ ಫಾರ್ಚೂನ್ಸ್ ಫಾರ್ವರ್ಡ್ ಬಳಸುವಂತೆ ಸಲಹೆ ನೀಡಿ ರಾಜ್ಯದ ಬೊಕ್ಕಸಕ್ಕೆ ಕೊಂಚ ಹೊರೆ ಹೇರಲು ಹೊರಟಿದ್ದಾರೆ.
ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಮುಖ್ಯಮಂತ್ರಿಯಾಗಿದ್ದಾಗ ಲ್ಯಾಂಡ್ ಕ್ರ್ಯೂಸರ್ ಗಳಲ್ಲಿ ಓಡಾಡುತ್ತಿದ್ದರು. ನಂತರ ಬಂದ ಅಖಿಲೇಶ್ ಯಾದವ್ ಉನ್ನತ ಮಟ್ಟದ 1.5 ಕೋಟಿ ರೂಪಾಯಿ ಬೆಲೆಬಾಳುವ ಮರ್ಸಿಡಿಸ್ ಕಾರು ಬಳಸಿದರು.
ಅಖಿಲೇಶ್ ಎರಡು ಮರ್ಸಿಡಿಸ್ ಕಾರು ಖರೀದಿಸಿದ್ದರು, ಒಂದು ತಮಗೆ ಮತ್ತು ಮತ್ತೊಂದು ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಗೆ, ಅದನ್ನು ಮುಲಾಯಂ ಸಿಂಗ್ ಈಗಲೂ ಬಳಸುತ್ತಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಅವರು ರಾಜ್ಯ ಸರ್ಕಾರದ ಕಾರನ್ನು ಬಳಸುತ್ತಿರುವುದರಿಂದ ಅದನ್ನು ಹಿಂತಿರುಗಿಸಲು ಹೇಳುವಂತೆ ಕೆಲವರು ಮುಖ್ಯಮಂತ್ರಿ ಕಿವಿಯಲ್ಲಿ ಊದಿದರಂತೆ. ಆದರೆ ಅವರ ಬಾಯಿ ಮುಚ್ಚಿಸಿದ ಯೋಗಿ ಆದಿತ್ಯನಾಥ್, ಅವರೇ ಮನಸ್ಸು ಮಾಡಿ ಕಾರನ್ನು ಹಿಂತಿರುಗಿಸುವುದಾದರೆ ಹಿಂತಿರುಗಿಸಲಿ, ಕೇಳಲು ಹೋಗಬೇಡಿ ಎಂದಿದ್ದಾರಂತೆ.
ಸ್ವಾಂಕ್ ಕಾರುಗಳು ಉತ್ತರ ಪ್ರದೇಶಕ್ಕೆ ಹೊಸದೇನಲ್ಲ. ಐಷಾರಾಮಿ ಕಾರುಗಳು ಮತ್ತು ಚಾರ್ಟರ್ಡ್ ವಿಮಾನಗಳು ಮಾಯಾವತಿಯವರ ಅಧಿಕಾರಾವಧಿಯಲ್ಲಿ  ಸಮಯದ ಅವಧಿಯಲ್ಲಿ ರಾಜ್ಯವನ್ನು ಪ್ರವೇಶಿಸಿದ್ದವು. ನಂತರ ಬಂದ ಅಖಿಲೇಶ್ ಯಾದವ್ ಯಾವುದನ್ನೂ ಖರೀದಿಸಲಿಲ್ಲ. ಪಕ್ಷದ ಹಿರಿಯ ಮುಖಂಡ ಅಜಂ ಖಾನ್ ಮಾತ್ರ 37 ಲಕ್ಷ ರೂಪಾಯಿಯ ಸ್ಕೊಡಾ ಕಾರು ಖರೀದಿ ಮಾಡಿದ್ದರು.
ಈಗಿನ ಮುಖ್ಯಮಂತ್ರಿ ಆದಿತ್ಯನಾಥ ಅವರು ಯೋಗಿ. ಸಂಯಮ ಅವರ ಶೋಭೆಯಾಗಿದೆ. ಲಕ್ನೋದ 5 ಕಾಳಿದಾಸ ಮಾರ್ಗದಲ್ಲಿರುವ ಬಂಗಲೆಗೆ ಪ್ರವೇಶಿಸಿದಾಗ ತಮ್ಮ ಲಿವಿಂಗ್ ಕೋಣೆ ಮತ್ತು ಕಚೇರಿಯನ್ನು ಬಿಟ್ಟರೆ ಬೇರೆ ಕಡೆಯೆಲ್ಲಾ ಎಸಿಗಳನ್ನು ತೆಗೆಸಿಬಿಟ್ಟಿದ್ದರು. ಈ ಎರಡು ಕೋಣೆಗಳಲ್ಲಿ ಅವರು ಎಸಿ ಉಳಿಸಿಕೊಂಡಿದ್ದು ತಮ್ಮನ್ನು ಭೇಟಿ ಮಾಡಲು ಬರುವವರಿಗಾಗಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com