ನವದೆಹಲಿ: ಸೆಪ್ಟೆಂಬರ್ ವರೆಗೆ ಆನ್ ಲೈನ್ ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿದರೆ ಪ್ರಯಾಣಿಕರಿಗೆ ಸೇವಾ ಶುಲ್ಕ ವಿನಾಯ್ತಿ ಸಿಗಲಿದೆ. ಕಳೆದ ವರ್ಷ ನವೆಂಬರ್ ನಲ್ಲಿ ನೋಟು ಅಮಾನ್ಯತೆ ನಂತರ ಸರ್ಕಾರ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದರೆ ಸೇವಾ ಶುಲ್ಕಕ್ಕೆ ಕೇಂದ್ರ ಸರ್ಕಾರ ವಿನಾಯ್ತಿ ನೀಡಿತ್ತು. ಡಿಜಿಟಲೀಕರಣ ವ್ಯವಸ್ಥೆಗೆ ಪ್ರೋತ್ಸಾಹ ನೀಡಲು ಈ ವಿನಾಯ್ತಿಯನ್ನು ಪ್ರಯಾಣಿಕರಿಗೆ ನೀಡಲಾಗಿತ್ತು.