ಸ್ಪೇಸ್ ಜೆಟ್ ವಿಮಾನ ಡಿಕ್ಕಿ, ಇಂಡಿಗೊ ಬಸ್ ನಲ್ಲಿದ್ದ ಐವರಿಗೆ ಗಾಯ

ಸ್ಪೇಸ್ ಜೆಟ್ ವಿಮಾನದ ರೆಕ್ಕೆ ಇಂಡಿಗೊ ಬಸ್ ಗೆ ತಗುಲಿದ್ದರಿಂದ ಬಸ್ ನಲ್ಲಿದ್ದ ಐವರು ಪ್ರಯಾಣಿಕರಿಗೆ ಗಾಯಗಳಾಗಿದೆ...
ಇಂಡಿಗೊ
ಇಂಡಿಗೊ
Updated on
ನವದೆಹಲಿ: ಸ್ಪೇಸ್ ಜೆಟ್ ವಿಮಾನದ ರೆಕ್ಕೆ ಇಂಡಿಗೊ ಬಸ್ ಗೆ ತಗುಲಿದ್ದರಿಂದ ಬಸ್ ನಲ್ಲಿದ್ದ ಐವರು ಪ್ರಯಾಣಿಕರಿಗೆ ಗಾಯಗಳಾಗಿದೆ. 
ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೊ ವಿಮಾನ ಮುಂಬೈಗೆ ಹೊರಡಬೇಕಿತ್ತು. ಈ ವೇಳೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಗೆ ಲ್ಯಾಂಡ್ ಆಗುತ್ತಿದ್ದ ಸ್ಪೇಸ್ ಜೆಟ್ ವಿಮಾನದ ರೆಕ್ಕೆ ತಗುಲಿದೆ. ಇದರಿಂದ ಇಂಡಿಗೊ ಬಸ್  ಕಿಟಕಿಗಳು ಹೊಡೆದಿದೆ. ಈ ಘಟನೆಯಲ್ಲಿ ಐವರು ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
ಈ ಪ್ರಕರಣ ಕುರಿತಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com