ಕೇಂದ್ರ ಮಾಜಿ ಸಚಿವ ಕಪಿಲ್ ಸಿಬಲ್
ಕೇಂದ್ರ ಮಾಜಿ ಸಚಿವ ಕಪಿಲ್ ಸಿಬಲ್

ಸರಕು ಮತ್ತು ಸೇವಾ ತೆರಿಗೆ ಸರ್ಕಾರಕ್ಕೆ ಒಳ್ಳೆಯದು, ಜನರಿಗೆ ಕೆಟ್ಟದು: ಕಾಂಗ್ರೆಸ್ ಟೀಕೆ

ಸರಕು ಮತ್ತು ಸೇವಾ ತೆರಿಗೆ ಸರ್ಕಾರಕ್ಕೆ ಒಳ್ಳೆಯದು, ಜನರಿಗೆ ಕೆಟ್ಟದು ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ...
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಸರ್ಕಾರಕ್ಕೆ ಒಳ್ಳೆಯದು, ಜನರಿಗೆ ಕೆಟ್ಟದು ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ.
ಜಿಎಸ್ ಟಿ ಉತ್ತಮ ಮತ್ತು ಸರಳ ತೆರಿಗೆ ವಿಧಾನ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್ ಈ ಹೇಳಿಕೆ ನೀಡಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್, ಜುಲೈ 1ರಂದು ದೇಶಾದ್ಯಂತ ಜಾರಿಗೆ ತಂದ ಹೊಸ ತೆರಿಗೆ ವಿಧಾನದ ನ್ಯೂನತೆಗಳನ್ನು ಹೇಳಿದರು.
ಹಲವು ಜಿಎಸ್ ಟಿ ತೆರಿಗೆ ಹಂತಗಳಿದ್ದು 0.25, 03, 05, 12, 18 ಮತ್ತು ಶೇಕಡಾ 28ರ ತೆರಿಗೆ ದರವಿರುತ್ತದೆ. ಜಿಎಸ್ ಟಿಗೆ ಹೊರತಾಗಿ ರಾಜ್ಯ ಸರ್ಕಾರಗಳು ಮುನ್ಸಿಪಲ್ ತೆರಿಗೆಯನ್ನು ಕೂಡ ಕಟ್ಟಬೇಕಾಗುತ್ತದೆ ಎಂದರು.
ಜಿಎಸ್ ಟಿಯ ನ್ಯೂನತೆಗಳಿಗೆ ಉದಾಹರಣೆ ನೀಡಿದ ಅವರು, ಒಂದು ಸಿನಿಮಾ ಟೆಕೆಟ್ ನ ಬೆಲೆ 100 ರೂಪಾಯಿಗಿಂತ ಕಡಿಮೆಯಿದ್ದರೆ, ಜಿಎಸ್ ಟಿ ತೆರಿಗೆ ಶೇಕಡಾ 18ಕ್ಕಿಂತ ಕಡಿಮೆಯಿರುತ್ತದೆ. 100 ರೂಪಾಯಿಗಿಂತ ಅಧಿಕವಾಗಿದ್ದರೆ ಶೇಕಡಾ 28 ರಷ್ಟಿರುತ್ತದೆ.
ತಮಿಳುನಾಡಿನಲ್ಲಿ ಸಿನಿಮಾ ಟಿಕೆಟ್ ಬೆಲೆ 100 ರೂಪಾಯಿಗಿಂತ ಜಾಸ್ತಿಯಾಗಿದ್ದರೆ ಶೇಕಡಾ 28ರಷ್ಟು ತೆರಿಗೆ ಮತ್ತು ಶೇಕಡಾ 30ರಷ್ಟು ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಅಂದರೆ ಒಬ್ಬ ಸಾಮಾನ್ಯ ಮನುಷ್ಯ ಶೇಕಡಾ 58ರಷ್ಟು ಮನರಂಜನಾ ತೆರಿಗೆಯನ್ನು ಸಿನಿಮಾ ಟಿಕೆಟ್ ಬೆಲೆ 100 ರೂಪಾಯಿಗಿಂತ ಹೆಚ್ಚಾಗಿದ್ದರೆ ನೀಡಬೇಕಾಗುತ್ತದೆ. ಮತ್ತು 100 ರೂಪಾಯಿಗಿಂತ ಕಡಿಮೆಯಿದ್ದರೆ ಶೇಕಡಾ 48ರಷ್ಟು ತೆರಿಗೆ ನೀಡಬೇಕಾಗುತ್ತದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಸಿನಿಮಾವೊಂದೆ ಸಾಮಾನ್ಯ ಜನರಿಗೆ ಮನರಂಜನಾ ಮಾಧ್ಯಮವಾಗಿದೆ. ಹಾಗಾದರೆ ಇದು ಎಂತಹ ತೆರಿಗೆ? ಇನ್ನೊಂದೆಡೆ ಮಹಾರಾಷ್ಟ್ರ ಸರ್ಕಾರ ರಸ್ತೆ ತೆರಿಗೆ ಮೇಲೆ ಶೇಕಡಾ 2ರಷ್ಟು ಹೆಚ್ಚು ಹೇರಲು ನಿರ್ಧರಿಸಿದೆ. ಇದು ಸಾಮಾನ್ಯ ಜನತೆ ಮೇಲೆ ಹೊರೆಯಾಗುತ್ತದೆ ಎಂದು ಟೀಕಿಸಿದರು.
ಪ್ಯಾಕೆಟ್ ಗಳಲ್ಲಿ ಇಟ್ಟ ಗೋಧಿ ಹಿಟ್ಟು, ಬಿಸ್ಕೆಟ್ ಗಳಿವೆ ತೆರಿಗೆಯಿದೆ, ಬಿಡಿಯಾಗಿ ಸಿಗುವುದಕ್ಕೆ ಇಲ್ಲ, ಈಗ ಯಾರು ಬಿಡಿ ವಸ್ತುಗಳನ್ನು ತೆಗೆದುಕೊಳ್ಳುತ್ತಾರೆ, ಎಲ್ಲರೂ ಪ್ಯಾಕೇಜ್ ಆಹಾರ ಪದಾರ್ಥಗಳನ್ನು ಖರೀದಿಸುತ್ತಾರೆ. ಅದು ಆರೋಗ್ಯಕ್ಕೆ ಉತ್ತಮ ಕೂಡ. ಇನ್ನು ಬಟ್ಟೆ ವ್ಯಾಪಾರಿಗಳಿಗೆ ಶೇಕಡಾ 5ರಷ್ಟು ತೆರಿಗೆ ವಿಧಿಸಿರುವುದು ಕೂಡ ಸರಿಯಲ್ಲ ಎಂದರು.

Related Stories

No stories found.

Advertisement

X
Kannada Prabha
www.kannadaprabha.com