ಗೋವಾ ಕಾಂಗ್ರೆಸ್ -ಪತ್ರಕರ್ತರ ವಾಟ್ಸಾಪ್ ಗ್ರೂಪ್ ನಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋ

ಗೋವಾ ಕಾಂಗ್ರೆಸ್- ಮಾಧ್ಯಮ ಅಧಿಕೃತ ವಾಟ್ಸಾಪ್ ಗ್ರೂಪ್ ನಲ್ಲಿ ಆಕಸ್ಮಿಕವಾಗಿ ಅಶ್ಲೀಲ ವಿಡಿಯೋ ಹರಿದಾಡುತ್ತಿದ್ದು, ವಿರೋಧ ಪಕ್ಷವಾದ ಕಾಂಗ್ರೆಸ್ ಗೆ ತೀವ್ರ ಮುಜುಗರ ಉಂಟು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಣಜಿ: ಗೋವಾ ಕಾಂಗ್ರೆಸ್ ಅಧಿಕೃತ ವಾಟ್ಸಾಪ್ ಗ್ರೂಪ್ ನಲ್ಲಿ ಆಕಸ್ಮಿಕವಾಗಿ ಅಶ್ಲೀಲ ವಿಡಿಯೋ ಹರಿದಾಡುತ್ತಿದ್ದು, ವಿರೋಧ ಪಕ್ಷವಾದ ಕಾಂಗ್ರೆಸ್ ಗೆ ತೀವ್ರ ಮುಜುಗರ ಉಂಟು ಮಾಡಿದೆ.
ಗೋವಾ ಕಾಂಗ್ರೆಸ್ ಮುಖ್ಯಸ್ಥ ಸುನೀಲ್ ಕತ್ವಾಂತರ್  ಈ ಬಗ್ಗೆ ಮಾಧ್ಯಮಗಳಿಗೆ ಕ್ಷಮೆ ಕೋರಿದ್ದಾರೆ. ವಾಟ್ಸಾಪ್ ಗ್ರೂಪ್ ನ ಸದಸ್ಯ ಬರ್ನಾಬ್ ಸಪೇಕೋ ಎಂಬಾತನನ್ನು ಗ್ರೂಪ್ ನಿಂದ ಹೊರ ಹಾಕಿದ್ದಾರೆ.
ಕಾಂಗ್ರೆಸ್ ನ ಅಧಿಕೃತ ವಾಟ್ಸಾಪ್ ಗ್ರೂಪ್ ಇದಾಗಿದ್ದು, ಮಾಧ್ಯಮಗಳ ಜೊತೆಗಿನ ಸಂವಹನಕ್ಕಾಗಿ ಬಳಸಲಾಗುತ್ತಿದೆ, ಗ್ರೂಪ್ ನಲ್ಲಿ ಪಕ್ಷದ ಪತ್ರಿಕಾ ಹೇಳಿಕೆ, ಪ್ರೆಸ್ ಕಾನ್ಫರೆನ್ಸ್ ಸಂಬಂಧ ಪತ್ರಕರ್ತರಿಗೆ ಗ್ರೂಪ್ ನಲ್ಲಿ ಮಾಹಿತಿ ನೀಡಲಾಗುತ್ತಿತ್ತು.
ಈ ಗ್ರೂಪ್ ನಲ್ಲಿ ಪತ್ರಕರ್ತರು ಹಾಗೂ ಕಾಂಗ್ರೆಸ್ ಮುಖಂಡರು ಸೇರಿ 80 ಮಂದಿ ಸದಸ್ಯರಿದ್ದಾರೆ ಎಂದು ಸುನೀಲ್ ತಿಳಿಸಿದ್ದಾರೆ.
ಇದೊಂದು ಗಂಭೀರ ವಿಷಯವಾಗಿದ್ದು, ಸದಸ್ಯನನ್ನು ಗ್ರೂಪ್ ನಿಂದ ರಿಮೂವ್ ಮಾಡಲಾಗಿದ್ದು, ಇತರ ಎಲ್ಲಾ ಸದಸ್ಯರ ಬಳಿ ಕ್ಷಮೆ ಯಾಚಿಸಿದ್ದಾರೆ. 
ನನಗೆ ಯಾರೋ ಆ ವಿಡಿಯೋ ಕಳುಹಿಸಿದ್ದರು, ಆದರೆ ಅದು ಆರ್ಕಸ್ಮಿಕವಾಗಿ ಈ ಗ್ರೂಪ್ ಗೆ ಸೆಂಟ್ ಆಯಿತು, ಅದಕ್ಕಾಗಿ ತಾವು ಕ್ಷಮೆಯಾಚಿಸುವುದಾಗಿ  ಗೋವಾ ರಾಜ್ಯ ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ಸಾಪೇಕೋ ಸ್ಪಷ್ಟ ಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com