ಆರ್ಥಿಕ ಸಂಕಷ್ಟ: ಎತ್ತುಗಳಿಲ್ಲದೆ ತನ್ನ ಹೆಣ್ಣುಮಕ್ಕಳನ್ನೇ ಬಳಸಿ ಹೊಲ ಉಳುಮೆ ಮಾಡಿದ ರೈತ

ಎತ್ತಗಳನ್ನು ಕೊಳ್ಳಲು ಹಣ ಇಲ್ಲದ ಕಾರಣ ರೈತನೊಬ್ಬ ತನ್ನ ಇಬ್ಬರು ಹೆಣ್ಣುಮಕ್ಕಳನ್ನೇ ಬಳಿಸಿ ಹೊಲ ಉಳುಮೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ...
ಹೆಣ್ಣುಮಕ್ಕಳನ್ನು ಬಳಸಿ ಹೊಲ ಉಳುಮೆ ಮಾಡುತ್ತಿರುವ ರೈತ
ಹೆಣ್ಣುಮಕ್ಕಳನ್ನು ಬಳಸಿ ಹೊಲ ಉಳುಮೆ ಮಾಡುತ್ತಿರುವ ರೈತ
ನವದೆಹಲಿ: ಎತ್ತಗಳನ್ನು ಕೊಳ್ಳಲು ಹಣ ಇಲ್ಲದ ಕಾರಣ ರೈತನೊಬ್ಬ ತನ್ನ ಇಬ್ಬರು ಹೆಣ್ಣುಮಕ್ಕಳನ್ನೇ ಬಳಿಸಿ ಹೊಲ ಉಳುಮೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 
ಇನ್ನು ಮಧ್ಯಪ್ರದೇಶದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿರುವ ಬೆನ್ನಲ್ಲೇ ಇಂತಹ ಘಟನೆ ನಡೆದಿದೆ. ಸೆಹೋರ್ ಜಿಲ್ಲೆಯ ಬಸಂತ್ ಪುರ ಗ್ರಾಮದ ಸರ್ದಾರ್ ಕಾಹ್ಲಾ ಎಂಬ ರೈತ ಎತ್ತಗಳ ಬದಲಿಗೆ ನೇಗಿಲ ನೋಗಕ್ಕೆ ತನ್ನ ಇಬ್ಬರು ಹೆಣ್ಣುಮಕ್ಕಳಾದ ರಾಧಿಕಾ ಮತ್ತು ಕುಂತಿ ಬಳಸಿ ಹೊಲ ಉಳುಮೆ ಮಾಡಿದ್ದಾನೆ. 
ಆರ್ಥಿಕ ತೊಂದರೆಯಿಂದಾಗಿ ನನ್ನಿಬ್ಬರು ಮಕ್ಕಳು ಅರ್ಧಕ್ಕೆ ಶಾಲೆ ತೊರೆದು ಮನೆಯಲ್ಲಿದ್ದಾರೆ. ಹೊಲ ಉಳುಮೆ ಮಾಡಲು ಎತ್ತುಗಳು ಇಲ್ಲದ ಕಾರಣ ಅವರನ್ನೇ ಉಳುಮೆಗೆ ಬಳಸಿಕೊಂಡಿದ್ದಾಗಿ ಕಾಹ್ಲಾ ಹೇಳಿದ್ದಾರೆ. 
ಹೆಣ್ಣು ಮಕ್ಕಳನ್ನು ಬಳಸಿ ಉಳುಮೆ ಮಾಡಿರುವ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು ಸರ್ಕಾರಿ ಯೋಜನೆಯಡಿ ನೆರವು ಒದಗಿಸಲಾಗುವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com