ರಘವರ್ ದಾಸ್
ದೇಶ
ಗುರು ಪೂರ್ಣಿಮೆ: ಮಹಿಳೆಯರಿಂದ ಪಾದ ತೊಳೆಸಿಕೊಂಡ ಜಾರ್ಖಂಡ್ ಮುಖ್ಯಮಂತ್ರಿ
ಗುರು ಮಹೋತ್ಸವ ಸಮಾರಂಭದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ಮಹಿಳೆಯರು ತೊಳೆದಿರುವ ಈ ವಿಡಿಯೋ ಇದೀಗ ...
ಜೆಮ್‌ಶ್ಷೆಡ್‌ಪುರ: ಗುರು ಮಹೋತ್ಸವ ಸಮಾರಂಭದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ಮಹಿಳೆಯರು ತೊಳೆದಿರುವ ಈ ವಿಡಿಯೋ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜೆಮ್‌ಶ್ಷೆಡ್‌ಪುರ ಬ್ರಹ್ಮ ಲೋಕಧಾನದಲ್ಲಿ ನಡೆಯುತ್ತಿರುವ ಗುರು ಮಹೋತ್ಸವ ಸಮಾರಂಭದಲ್ಲಿ ಮಹಿಳೆಯರಿಬ್ಬರು ರಘುವರ್ ದಾಸ್ ಅವರ ಪಾದಗಳನ್ನು ತೊಳೆದಿದ್ದಾರೆ. ಈ ವಿಡಿಯೋ ಇದೀ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭದ್ರತಾ ಸಿಬ್ಬಂದಿಯೊಟ್ಟಿಗೆ ಬಂದ ರಘುವರ್ ದಾಸ್ ಅವರನ್ನು ದೊಡ್ಡ ತಟ್ಟೆಯೊಂದರಲ್ಲಿ ನಿಲ್ಲಿಸಿ ಹೂವಿನ ಎಸಳುಗಳಿರುವ ನೀರನ್ನು ಇಬ್ಬರು ಮಹಿಳೆಯರು ಬಿಂದಿಗೆಯಿಂದ ಅವರ ಪಾದಕ್ಕೆ ಹಾಕಿ ತೊಳೆಯುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ