ನಾಗ್ಪುರ: ಇಲ್ಲಿನ ವೆನಾ ಡ್ಯಾಂನಲ್ಲಿ ಬೋಟ್ ಮುಳುಗಿ ಎಂಟು ಯುವಕರು ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಾಗ್ಪುರದಿಂದ 25 ಕಿ.ಮೀ ದೂರದ ಅಮರಾವತಿ ರಸ್ತೆ ಬಳಿಯ ವೆನಾ ಡ್ಯಾಂಗೆ ವಿಹಾರಕ್ಕೆಂದು 11 ಯುವಕರ ತಂಡ ಬಂದಿತ್ತು. ಈ ವೇಳೆ ಯುವಕರು ಬೋಟ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಬೋಟ್ ಮುಳುಗಿದೆ. ಇದರಲ್ಲಿ ಎಂಟು ಮಂದಿ ನೀರುಪಾಲಾಗಿದ್ದು ಮೂವರು ಈಜು ದಡ ಸೇರಿ ಜೀವ ಉಳಿಸಿಕೊಂಡಿದ್ದಾರೆ.
ಈ ಯುವಕರು ಬೋಟ್ ನಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯವನ್ನು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದರು. ಇದಾದ ನಂತರ ಬೋಟ್ ಮುಳುಗಡೆಗೊಂಡಿದೆ.