ಅಮರನಾಥ ದಾಳಿ: ಬಸ್ ಚಾಲಕ ಸಲೀಮ್ ಹೆಸರು ಶೌರ್ಯ ಪ್ರಶಸ್ತಿಗೆ ಶಿಫಾರಸು?

ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ಉಗ್ರರ ದಾಳಿಗೆ ಆಂತಕಕ್ಕೊಳಗಾಗದೆ ತನ್ನ ಪ್ರಾಣದ ಹಂಗು ತೊರೆದ ಗುಜರಾತ್ ಚಾಲಕ ಸಲೀಂ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಗುಜರಾತ್ ಬಸ್ ಚಾಲಕ ಸಲೀಮ್
ಗುಜರಾತ್ ಬಸ್ ಚಾಲಕ ಸಲೀಮ್
ಸೂರತ್: ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ಉಗ್ರರ ದಾಳಿಗೆ ಆಂತಕಕ್ಕೊಳಗಾಗದೆ ತನ್ನ ಪ್ರಾಣದ ಹಂಗು ತೊರೆದ ಗುಜರಾತ್ ಚಾಲಕ ಸಲೀಂ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗುವುದು ಎಂದು ಗುಜರಾತ್ ಸಿಎಂ ಹೇಳಿದ್ದಾರೆ. 
ಅಮರನಾಥ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಬಸ್ ನ್ನು ಸಲೀಂ ಚಾಲನೆ ಮಾಡುತ್ತಿದ್ದರು. ಅಮರನಾಥನ ದರ್ಶನ ಪಡೆದ ಬಳಿಕ ಬಸ್ ನಲ್ಲಿ ಕುಳಿತಿದ್ದ ಯಾರ್ತಾರ್ಥಿಗಳು ನಿದ್ರೆಗೆ ಜಾರಿದ್ದರು. ಉಗ್ರರು ಗುಂಡು ಹಾರಿಸುತ್ತಿದ್ದಂತೆಯೇ ಪ್ರಾಣ ಭೀತಿಯಿಂದ ಯಾತ್ರಾರ್ಥಿಗಳು ಕೂಗಾಡಲು ಆರಂಭಿಸಿದ್ದಾರೆ. ಈ ವೇಳೆ ಭೀತಿಗೊಳಗಾಗದ ಸಲೀಂ ಅವರು ಬಸ್ ನ್ನು ಮತ್ತಷ್ಟು ವೇಗವಾಗಿ ಚಾಲನೆ ಮಾಡಿ 50ಕ್ಕೂ ಹೆಚ್ಚು ಯಾತ್ರಾರ್ಥಿಗಳ ಪ್ರಾಣವನ್ನು ರಕ್ಷಣೆ ಮಾಡಿದ್ದರು. 
ಈ ಬಗ್ಗೆ ಗುಜರಾತ್ ನ ಮುಖ್ಯಮಂತ್ರಿ ವಿಜಯ್ ರೂಪಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶೇಖ್ ಅವರ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com