ಅಮರನಾಥ ಯಾತ್ರಿಗಳ ಮೇಲೆ ದಾಳಿ: ಎಲ್ ಇಟಿ ಕಮಾಂಡರ್ ಅಬು ಇಸ್ಮಾಯಿಲ್ ಗಾಗಿ ಶೋಧ

ಅಮರನಾಥ ಯಾತ್ರಿಗಳ ಮೇಲೆ ದಾಳಿ ನಡೆಸಿ 7 ಮಂದಿ ಸಾವಿಗೆ ಕಾರಣವಾದ ಕೃತ್ಯದ ಮಾಸ್ಟರ್ ಮೈಂಡ್ ಎಲ್ ಇಟಿ ಕಮಾಂಡರ್ ಹಾಗೂ ಪಾಕಿಸ್ತಾನಿ ಪೌರ ಉಗ್ರ ಅಬು
ದಾಳಿಯಲ್ಲಿ ಗಾಯಗೊಂಡ ಭಕ್ತರು
ದಾಳಿಯಲ್ಲಿ ಗಾಯಗೊಂಡ ಭಕ್ತರು
ಶ್ರೀನಗರ: ಅಮರನಾಥ ಯಾತ್ರಿಗಳ ಮೇಲೆ ದಾಳಿ ನಡೆಸಿ 7 ಮಂದಿ ಸಾವಿಗೆ ಕಾರಣವಾದ ಕೃತ್ಯದ ಮಾಸ್ಟರ್ ಮೈಂಡ್ ಎಲ್ ಇಟಿ ಕಮಾಂಡರ್  ಹಾಗೂ ಪಾಕಿಸ್ತಾನಿ ಪೌರ ಉಗ್ರ ಅಬು ಇಸ್ಮಾಯಿಲ್ ಗಾಗಿ ರಕ್ಷಣಾ ಪಡೆಗಳು ಶೋಧ ಮುಂದುವರಿಸಿವೆ.
ದಕ್ಷಿಣ ಕಾಶ್ಮೀರದಲ್ಲಿ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, ಅಬು ಇಸ್ಮಾಯಿಲ್ ಗಾಗಿ ಬಲೆ ಬೀಸಿದ್ದಾರೆ. ಅಬು ಇಸ್ಮಾಯಿಲ್ ಕಳೆದ ಒಂದು ವರ್ಷದಿಂದ ದಕ್ಷಿಣ ಕಾಶ್ಮಿರದಲ್ಲಿ ಸಕ್ರಿಯನಾಗಿದ್ದಾನೆ. 
ಪಾಂಪೋರೆಯಲ್ಲಿ ಆಶ್ರಯ ಪಡೆದಿರುವ 24 ವರ್ಷದ ಇಸ್ಮಾಯಿಲ್‌ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ಕೂಡ ಘೋಷಿಸಲಾಗಿದೆ. ಇತರ ಮೂವರೊಂದಿಗೆ ಸೇರಿ ಇಸ್ಮಾಯಿಲ್‌ ಬಸ್‌ ಮೇಲೆ ದಾಳಿ ಮಾಡಿದ್ದಾನೆ ಎಂದು ಹೇಳಲಾಗಿದೆ. 
ಭದ್ರತಾ ಬೆಂಗಾವಲಿನ ರಕ್ಷಣೆಯಲ್ಲಿ ಬಸ್‌ ಇರಲಿಲ್ಲ. ಜೊತೆಗೆ ಸೂಕ್ಷ್ಮ ಪ್ರದೇಶವಾದ ಅನಂತನಾಗ್‌ಗೆ ಅದು ರಾತ್ರಿ ತಲುಪಿದ್ದರಿಂದ ದಾಳಿಗೆ ಸುಲಭ ತುತ್ತಾಯಿತು. ಸೋಮವಾರ ಸಂಜೆ ಅಮರನಾಥ ಯಾತ್ರಿಗಳ ಮೇಲೆ ನಡೆದ  ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿ 15 ಮಂದಿ ಗಾಯಗೊಂಡಿದ್ದರು.
ರಕ್ಷಣಾ ಪಡೆಗಳು ಎಲ್ ಇಟಿಯ ಭಶೀರ್ ಲಶ್ಕರಿ ಸೇರಿದಂತೆ ಹಲವಾರು ಎಲ್ ಇಟಿ ಉಗ್ರರನ್ನು ಕೊಂದ ಕಾರಣ ಭ್ರಮನಿರಸನಗೊಂಡ ಉಗ್ರರು ಈ ಕೃತ್ಯ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಇನ್ನೂ ಅಮರನಾಥ ಯಾತ್ರಿಗಳ ಮೇಲಿನ  ದಾಳಿಯನ್ನು ಖಂಡಿಸಿರುವ ಎಲ್ ಇಟಿ ವಕ್ತಾರ ಅಬ್ದುಲ್ಲಾ ಘಜ್ನಾವಿ ಇದು ಇಸ್ಲಾಂ ಬೋಧನೆಗಳಿಗೆ ವಿರುದ್ಧವಾದುದ್ದಾಗಿದೆ ಎಂದು ಖಂಡಿಸಿದ್ದಾನೆ. ನಂಬಿಕೆಗಳ ವಿರುದ್ಧ ಹಿಂಸಾಚಾರ ನಡೆಸುವುದನ್ನು ಇಸ್ಲಾಮ್ ಯಾವುತ್ತೂ ಒಪ್ಪುವುದಿಲ್ಲ ಎಂದು ಹೇಳಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com