ನವದೆಹಲಿ: ಅಮರನಾಥ ಯಾತ್ರಿಕರ ಮೇಲೆ ಗುಂಡಿನ ದಾಳಿ ನಡೆಸಿದವರು ಪೊಲೀಸ್ ಸಮವಸ್ತ್ರ ಧರಿಸಿದ್ದರು ಎಂದು ಭಯೋತ್ಪಾದಕ ದಾಳಿಯ ಉಗ್ರರ ದಾಳಿಯಿಂದ ಬದುಕುಳಿದವರು ಹೇಳಿದ್ದಾರೆ.
5 ಜನ ರಸ್ತೆಯ ಮೇಲೆ ನಿಂತಿದ್ದರು, ಇನ್ನಿಬ್ಬರು ಮೋಟಾರ್ ಬೈಕ್ ನಲ್ಲಿ ಬಂದು ಗುಂಡು ಹಾರಿಸತೊಡಗಿದರು, ಅವರೆಲ್ಲರೂ ಪೊಲೀಸ್ ಸಮವಸ್ತ್ರದಲ್ಲಿದ್ದರು, ಪೊಲೀಸರೇಕೆ ನಮ್ಮತ್ತ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ಅಚ್ಚರಿಯಾಯಿತು ಎಂದು ಉಗ್ರರ ದಾಳಿಯಲ್ಲಿ ಬದುಕುಳಿದಿರುವ ಭಾಗ್ಯಮಣಿ ಠಾಕೂರ್ ಹೇಳಿದ್ದಾರೆ.
ಓರ್ವ ಭಯೋತ್ಪಾದಕ ಬಸ್ ನೊಳಗೆ ನುಗ್ಗಲೂ ಯತ್ನಿಸಿದ, ಆದರೆ ಕ್ಲೀನರ್ ಬಸ್ ನ ಬಾಗಿಲು ಹಾಕಿದರು, ಈ ಘಟನೆಯಾದ ಬಳಿಕ 10-15 ನಿಮಿಷ ಡ್ರೈವ್ ಮಾಡಿದ ನಂತರ ಚಾಲಕ ಬಸ್ ನ್ನು ಸೇನಾ ವಾಹನಗಳ ನಡುವೆ ನಿಲ್ಲಿಸಿದರು. ಆ ವೇಳೆಗೆ ಗುಂಡಿನ ಮೊರೆತದ ಸದ್ದು ಕೇಳಿದ್ದ ಸೇನಾ ಪಡೆ ನಮ್ಮತ್ತ ಧಾವಿಸುತ್ತಿತ್ತು ಎಂದು ಬದುಕುಳಿದ ಯಾತ್ರಾರ್ಥಿಗಳು ಹೇಳಿದ್ದಾರೆ.