ಮದರಸ ವಿದ್ಯಾರ್ಥಿಗಳು
ದೇಶ
ಬೆಂಗಳೂರು: ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದ ಮಕ್ಕಳು ಮರಳಿ ಮದರಸಾಗೆ
ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಜು.11 ರಂದು ವಶಕ್ಕೆ ಪಡೆಯಲಾಗಿದ್ದ ಸುಮಾರು 160 ಮದರಸಾ ವಿದ್ಯಾರ್ಥಿಗಳನ್ನು ವಾಪಸ್ ಕಳಿಸಲಾಗಿದೆ.
ಬೆಂಗಳೂರು: ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಜು.11 ರಂದು ವಶಕ್ಕೆ ಪಡೆಯಲಾಗಿದ್ದ ಸುಮಾರು 160 ಮದರಸಾ ವಿದ್ಯಾರ್ಥಿಗಳನ್ನು ವಾಪಸ್ ಕಳಿಸಲಾಗಿದೆ.
ಗುವಾಹಟಿ ಎಕ್ಸ್ ಪ್ರೆಸ್ ರೈಲಿನಿಂದ ಕಂಟೋನ್ಮೆಂಟ್ ರೈಲು ನಿಲ್ದಾಣ ತಲುಪಿದ್ದ ವಿದ್ಯಾರ್ಥಿಗಳು ಬಾಂಗ್ಲಾದವರಾಗಿದ್ದು, ಅವರನ್ನು ಕೇರಳಕ್ಕೆ ಸಾಗಿಸಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಪೊಲೀಸರು ರೈಲಿನಲ್ಲಿ ಬಂದಿದ್ದ 160 ಮದರಸಾ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು.
ಪರಿಶೀಲನೆ ನಡೆಸಿದ ಬಳಿಕ 160 ವಿದ್ಯಾರ್ಥಿಗಳು ರಂಜಾನ್ ರಜೆಗೆ ತಮ್ಮ ಊರುಗಳಿಗೆ ತೆರಳಿ ವಾಪಸ್ ಕೇರಳದ ಮದರಸಾಗಳಿಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ. ವಶಕ್ಕೆ ಪಡೆಯಲಾಗಿದ್ದ ವಿದ್ಯಾರ್ಥಿಗಳನ್ನು ವಾಪಸ್ ಕಳಿಸಲಾಗಿದ್ದು, ಮದರಸಾ ವಿದ್ಯಾರ್ಥಿಗಳ ಗುರುತಿನ ಚೀಟಿ ದಾಖಲೆಯನ್ನು, ಪೋಷಕರ ವಿವರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಕೆಲವು ದಿನಗಳು ಬೇಕಾಗುತ್ತವೆ ಎಂದು ರೈಲ್ವೆ ನಿಲ್ದಾಣದ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


