ದಲಿತರ ವಿರುದ್ಧ ದಲಿತರ ಸ್ಪರ್ಧೆ ನೈಜ ಮುಖವಾಡ ತೋರುತ್ತದೆ: ಮೀರಾ ಕುಮಾರ್

ದಲಿತರ ವಿರುದ್ಧ ದಲಿತರ ಸ್ಪರ್ಧೆ ಎಂಬುದಾಗಿ ಬಿಂಬಿಸುತ್ತಿರುವುದು ಸಮಾಜದಲ್ಲಿ ಇನ್ನೂ ಜನ ಜಾತಿಯ ಬಗ್ಗೆ ಯಾವ ರೀತಿಯ ಚಿಂತನೆ...
ಮೀರಾ ಕುಮಾರ್
ಮೀರಾ ಕುಮಾರ್
ರಾಯ್ ಪುರ್: ದಲಿತರ ವಿರುದ್ಧ ದಲಿತರ ಸ್ಪರ್ಧೆ ಎಂಬುದಾಗಿ ಬಿಂಬಿಸುತ್ತಿರುವುದು ಸಮಾಜದಲ್ಲಿ ಇನ್ನೂ ಜನ ಜಾತಿಯ ಬಗ್ಗೆ ಯಾವ ರೀತಿಯ ಚಿಂತನೆ ಇಟ್ಟುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ. ಹಾಗೂ ನೈಜ ಮುಖವಾಡವನ್ನು ಬಹಿರಂಗ ಪಡಿಸುತ್ತದೆ ಎಂದು ರಾಷ್ಟ್ರಪತಿ ಚುನಾವಣೆಯ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಅಯ್ಕೆಯಾಗಿರುವ  ಮೀರಾ ಕುಮಾರ್ ಹೇಳಿದ್ದಾರೆ.
ಜುಲೈ 17 ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಕೋರಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮೀರಾ ಕುಮಾರ್, ಮೊದಲ ಬಾರಿಗೆ ರಾಷ್ಟ್ರಪತಿ ಚುನಾವಣೆ ಸಿದ್ಧಾಂತಗಳ ಆಧಾರದ ಮೇಲೆ ನಡೆಯುತ್ತಿದೆ ಎಂದು ತಿಳಿಸಿದರು.
ಎನ್ ಡಿ ಎ ಅಭ್ಯರ್ಥಿ ಕೂಡ ದಲಿತ ಆಗಿದ್ದಾರೆ, ದಲಿತರ ವಿರುದ್ಧ ದಲಿತರ ಸ್ಪರ್ಧೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರಕ್ಕೆ ನನಗೆ ನೋವು ಮತ್ತು ಸಂತೋಷ ಆಗುತ್ತಿದೆ ಎಂದು ಹೇಳಿದ್ದಾರೆ.
ಸಮಾಜದ ನೈಜ ಮುಖವಾಡ ತೋರುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ.ಆದರೆ ಇಂಥ ವಿಷಯಗಳು ಸಮಾಜದಲ್ಲಿ ಇನ್ನೂ ಚರ್ಚೆಯಾಗುತ್ತಿವೆ ಎಂಬುದಕ್ಕೆ ನೋವಾಗುತ್ತಿದೆ. ನಾವು ಜಾತಿ ಪದ್ಧತಿ ಅಡಿಯಲ್ಲಿ ನಮ್ಮನ್ನು ಇಟ್ಟುಕೊಂಡಿದ್ದೇವೆ ಎಂದರೇ  ನಾವು ಎಂದಿಗೂ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಮೀರಾ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com