ಕತ್ತಲಿನಿಂದ ಬೆಳಕಿನೆಡೆಗೆ: ಕಾಶ್ಮೀರದ ಮಕ್ಕಳಿಗಾಗಿ ಸೇನೆಯಿಂದ 'ಆಪರೇಶನ್ ಸದ್ಭಾವನ'

ಕಾಶ್ಮೀರಿಗಳ ಮನಗೆಲ್ಲಲು ಭಾರತೀಯ ಸೇನೆ ಕಾಶ್ಮೀರ ಮಕ್ಕಳಿಗೆ ಶಿಕ್ಷಣ ನೀಡುವುದರತ್ತ ಗಮನ ಹರಿಸಿದ್ದು, ಉಚಿತ ಮುಕ್ತ ಸೇನಾ ಶಾಲೆಯ ಯೋಜನೆ ಹಮ್ಮಿಕೊಂಡಿದೆ.
ಕಾಶ್ಮೀರದ ಮಕ್ಕಳಿಗಾಗಿ ಸೇನೆಯಿಂದ 'ಆಪರೇಶನ್ ಸದ್ಭಾವನ'
ಕಾಶ್ಮೀರದ ಮಕ್ಕಳಿಗಾಗಿ ಸೇನೆಯಿಂದ 'ಆಪರೇಶನ್ ಸದ್ಭಾವನ'
ಶ್ರೀನಗರ: ಕಾಶ್ಮೀರಿಗಳ ಮನಗೆಲ್ಲಲು ಭಾರತೀಯ ಸೇನೆ ಕಾಶ್ಮೀರ ಮಕ್ಕಳಿಗೆ ಶಿಕ್ಷಣ ನೀಡುವುದರತ್ತ ಗಮನ ಹರಿಸಿದ್ದು, ಉಚಿತ ಮುಕ್ತ ಸೇನಾ ಶಾಲೆಯ ಯೋಜನೆ ಹಮ್ಮಿಕೊಂಡಿದೆ. 
ಗಂಡರ್ಬಲ್ ಮತ್ತು ಸೋನಾಮಾರ್ಗ್ ಗಳಲ್ಲಿ ಆಪರೇಷನ್ ಸದ್ಭಾವನಾ ಅಭಿಯಾನದ ಮೂಲಕ ಭಾರತೀಯ ಸೇನೆ ಕಾಶ್ಮೀರಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಸೇನಾ ಸಿಬ್ಬಂದಿಗಳು ಕಾಶ್ಮೀರದ ಮಕ್ಕಳಿಗೆ ಉಚಿತ ಪುಸ್ತಕ, ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಿದ್ದು, ಶಾಲೆಯ ಮೆಟ್ಟಿಲನ್ನು ಹತ್ತದ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಅಲ್ತಾಫ್ ಅಹ್ಮದ್ ಹೇಳಿದ್ದಾರೆ.
ಕಳೆದ ವರ್ಷವೂ ಇದೇ ಮಾದರಿಯಲ್ಲಿ ಭಾರತೀಯ ಸೇನೆ ಸ್ಕೂಲ್ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಣ ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com