ಬಂಡಿಪೋರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಾಂಭಲ್ ಬಳಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನೋರ್ವನನ್ನು ಭಾರತೀಯ ಸೇನೆ ಬಂಧಿಸಿದೆ.
ವಿಶೇಷ ಆಪರೇಷನ್ ಗ್ರೂಪ್(ಎಸ್ಒಜಿ) ಮತ್ತು 13ನೇ ರಾಷ್ಟ್ರೀಯ ರೈಫಲ್ಸ್(ಆರ್ಆರ್) ಸೇನೆ ಜಂಟಿಯಾಗಿ ನಡೆಸಿ ಉಗ್ರನನ್ನು ಬಂಧಿಸಿದ್ದು ಉಗ್ರನನ್ನು ಶಹಬಾಜ್ ಮಿರ್ ಎಂದು ಗುರುತಿಸಲಾಗಿದೆ.
ಬಂಧಿತ ಉಗ್ರನ ಬಳಿಯಿಂದ ಒಂದು ಪಿಸ್ತೂಲ್, ಗುಂಡುಗಳು, ಗ್ರೈನೇಡ್ಸ್ ಮತ್ತು ಒಂದು ಚೂರಿಯನ್ನು ಸೇನೆ ವಶಪಡಿಸಿಕೊಂಡಿದೆ.
ಜುಲೈ 11ರಂದು ಕಾಶ್ಮೀರ ಪೊಲೀಸರು ಮತ್ತು ಸಿಆರ್ಪಿಎಫ್ ಯೋಧರು ಜಂಟಿ ಕಾರ್ಯಾಚರಣೆ ನಡೆಸಿ ಮೂವರು ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಯ ಮೂವರು ಉಗ್ರರನ್ನು ಹತ್ಯೆಗೈದಿದ್ದರು.