ಮೋದಿ, ಮನಮೋಹನ್ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ನೀಡಲು ನಕಾರ: ಆರ್ ಟಿಐ ಕಾರ್ಯಕರ್ತ

ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು 2010, ಜನವರಿಯಿಂದ ಈವರೆಗೆ....
ಮನಮೋಹನ್ ಸಿಂಗ್ - ನರೇಂದ್ರ ಮೋದಿ
ಮನಮೋಹನ್ ಸಿಂಗ್ - ನರೇಂದ್ರ ಮೋದಿ
ಲಖನೌ: ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು  2010, ಜನವರಿಯಿಂದ ಈವರೆಗೆ ಕೈಗೊಂಡ ವಿದೇಶಿ ಪ್ರವಾಸಗಳ ವೆಚ್ಚದ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.
ಪ್ರಧಾನಿ ಹಾಗೂ ಮಾಜಿ ಪ್ರಧಾನಿಯ ವಿದೇಶ ಪ್ರವಾಸಗಳ ವೆಚ್ಚದ ಬಗ್ಗೆ ಮಾಹಿತಿ ಕೋರಿ ನೂತನ್‌ ಠಾಕೂರ್‌ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ(ಆರ್‌ಟಿಐ) ಅರ್ಜಿ ಸಲ್ಲಿಸಿದ್ದರು. ಆದರೆ ಈ ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಪ್ರಧಾನಿ ಕಾರ್ಯಾಲಯ ಅರ್ಜಿದಾರರ ಪ್ರಶ್ನೆ ಅಸ್ಪಷ್ಟವಾಗಿದೆ ಎಂದು ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯ ನಿರಾಕರಿಸಿರುವುದಾಗಿ ನೂತನ್ ಠಾಕೂರ್‌ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನರೇಂದ್ರ ಮೋದಿ ಹಾಗೂ ಮನಮೋಹನ್‌ ಸಿಂಗ್‌ ಅವರ ವಿದೇಶ ಪ್ರವಾಸಗಳ ಕುರಿತ ಎಲ್ಲಾ ಕಡತಗಳ ನಕಲು ಹಾಗೂ ಪ್ರವಾಸಗಳ ಕುರಿತಂತೆ ಪ್ರಧಾನಿ ಕಾರ್ಯಾಲಯ ಮತ್ತು ವಿವಿಧ ಕಚೇರಿಗಳ ಮಧ್ಯೆ ವಿನಿಮಯವಾದ ಪತ್ರಗಳನ್ನು ಒದಗಿಸುವಂತೆ ಠಾಕೂರ್ ಪ್ರಧಾನಿ ಕಾರ್ಯಾಲಯಕ್ಕೆ ಜೂನ್‌ 16ರಂದು ಅರ್ಜಿ ಸಲ್ಲಿಸಿದ್ದರು.
ಈ ಆರ್‌ಟಿಐ ಅರ್ಜಿಗೆ ಗುರುವಾರ ಉತ್ತರಿಸಿರುವ ಪ್ರಧಾನಿ ಕಾರ್ಯಾಲಯದ ಕಾರ್ಯದರ್ಶಿಯವರ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರವೀನ್‌ ಕುಮಾರ್ ಅವರು, 'ಕೋರಿರುವ ಮಾಹಿತಿ ತುಂಬಾ ಅಸ್ಪಷ್ಟ ಮತ್ತು ವ್ಯಾಪಕ'ವಾಗಿದೆ ಎಂದು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com