ರೈಲಿನ ಬಾಗಿಲಲ್ಲಿ ನಿಂತಿದ್ದ ವ್ಯಕ್ತಿಯಿಂದ ಫೋನ್ ಕಸಿದುಕೊಂಡ ದುಷ್ಕರ್ಮಿಗಳು!

ತಮಿಳು ಚಿತ್ರ ಕಾಕ ಮೊಟ್ಟೈ ನಲ್ಲಿ ಮಕ್ಕಳು ಕೋಲನ್ನು ಬಳಕೆ ಮಾಡಿ ಮೊಬೈಲ್ ಕದಿಯುವ ದೃಶ್ಯದಿಂದ ಪ್ರೇರಣೆ ಪಡೆದು, ಕೆಲವು ದುಷ್ಕರ್ಮಿಗಳು ರೈಲಿನ ಬಾಗಿಲ ಬಳಿ ನಿಂತಿದ್ದ ವ್ಯಕ್ತಿಯೊಬ್ಬರಿಂದ ಮೊಬೈಲ್ ಕಸಿದಿದ್ದಾರೆ.
ರೈಲು (ಸಂಗ್ರಹ ಚಿತ್ರ)
ರೈಲು (ಸಂಗ್ರಹ ಚಿತ್ರ)
ಬೆಂಗಳೂರು: ತಮಿಳು ಚಿತ್ರ ಕಾಕ ಮೊಟ್ಟೈ ನಲ್ಲಿ ಮಕ್ಕಳು ಕೋಲನ್ನು ಬಳಕೆ ಮಾಡಿ ಮೊಬೈಲ್ ಕದಿಯುವ ದೃಶ್ಯದಿಂದ ಪ್ರೇರಣೆ ಪಡೆದು, ಕೆಲವು ದುಷ್ಕರ್ಮಿಗಳು ರೈಲಿನ ಬಾಗಿಲ ಬಳಿ ನಿಂತಿದ್ದ ವ್ಯಕ್ತಿಯೊಬ್ಬರಿಂದ ಮೊಬೈಲ್ ಕಸಿದಿದ್ದಾರೆ. 
ಬೆಂಗಳೂರು-ಧರ್ಮಪುರಿ ಪ್ಯಾಸೆಂಜರ್ ಟ್ರೈನ್ ನಲ್ಲಿ ಈ ಘಟನೆ ನಡೆದಿದ್ದು, ಈ ವಾರದಲ್ಲಿ ನಾಲ್ಕು ಪ್ರಯಾಣಿಕರು ಇದೇ ಮಾದರಿಯಲ್ಲಿ ಫೋನ್ ಕಳೆದುಕೊಂಡಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ರೈಲು ಸಾಮಾನ್ಯವಾಗಿ ಜನರಿಂದ ಕಿಕ್ಕಿರಿದಿರುತ್ತದೆ. 1,500 ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಲಿದ್ದು, ಹೆಚ್ಚಿನ ಮಂದಿ ಬಾಗಿಲ ಬಳಿ ನಿಂತು ಮೊಬೈಲ್ ನಲ್ಲಿ ಹಾಡು ಕೇಳುತ್ತಿರುತ್ತಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಮೊಬೈಲ್ ಕದಿಯುವವರು ಹೊಸ ಮಾದರಿಯನ್ನು ಕಂಡುಕೊಂಡಿದ್ದು, ಬಾಗಿಲ ಬಳಿ ನಿಂತಿರುವವರ ಮೊಬೈಲ್ ಗಳನ್ನು ಕೋಲು ಬಳಕೆ ಮಾಡಿ ಕಸಿಯುತ್ತಿದ್ದಾರೆ. ರೈಲು ಚಾಲನೆಯಲ್ಲಿರುತ್ತದೆಯಾದ್ದರಿಂದ ಪ್ರಯಾಣಿಕರು ಮೊಬೈಲ್ ಕಳೆದುಕೊಂಡರೂ ಅಸಹಾಯಕ ಪರಿಸ್ಥಿತಿಯಲ್ಲಿ ಸಿಲುಕಿರುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com