ಮುಂಗಾರು ಅಧಿವೇಶನಕ್ಕೂ ಮುನ್ನ ಸೋನಿಯಾ ಸೇರಿದಂತೆ ವಿಪಕ್ಷ ನಾಯಕರಿಗೆ ಮೋದಿ ಶುಭಾಶಯ

ಸಂಸತ್ ನಲ್ಲಿ ಮುಂಗಾರು ಅಧಿವೇಶನ ಪ್ರಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ನಾಯಕರು ಕುಳಿತ್ತಿದ್ದ ಜಾಗಕ್ಕೆ ತೆರಳಿ ಕಾಂಗ್ರೆಸ್ ಅಧ್ಯಕ್ಷೆ...
ಸೋನಿಯಾ ಗಾಂಧಿ ಅವರಿಗೆ ನಮಸ್ಕರಿಸುತ್ತಿರುವ ನರೇಂದ್ರ ಮೋದಿ
ಸೋನಿಯಾ ಗಾಂಧಿ ಅವರಿಗೆ ನಮಸ್ಕರಿಸುತ್ತಿರುವ ನರೇಂದ್ರ ಮೋದಿ
Updated on: 
ನವದೆಹಲಿ: ಸಂಸತ್ ನಲ್ಲಿ ಮುಂಗಾರು ಅಧಿವೇಶನ ಪ್ರಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ನಾಯಕರು ಕುಳಿತ್ತಿದ್ದ ಜಾಗಕ್ಕೆ ತೆರಳಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಎಲ್ಲಾ ಸದಸ್ಯರಿಗೂ ಶುಭಾಶಯ ತಿಳಿಸಿದರು. 
ಮುಂಗಾರು ಅಧಿವೇಶನ ಪ್ರಾರಂಭಕ್ಕೂ ಐದು ನಿಮಿಷ ಮುಂಚಿತವಾಗಿ ಸದನಕ್ಕೆ ಬಂದ ಪ್ರಧಾನಿ ಮೋದಿ ಸದನದ ವಿಪಕ್ಷ ಗ್ಯಾಲರಿಯ ಮುಂಭಾಗದಲ್ಲಿ ಕುಳಿತಿದ್ದ ಲೋಕಸಭಾ ಸದಸ್ಯರಿಗೆ ಶುಭಾಶಯ ಹೇಳಿದರು. 
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭಾ ಉಪ ಸ್ಪಿಕರ್ ಎಂ ತಂಬಿದೊರೈ ಅವರಿಗೆ ಕೈಕುಲುಕಿ ಶುಭಾಶಯ ಹೇಳಿದರು. ಇನ್ನು ಸೋನಿಯಾ ಗಾಂಧಿ ಅವರಿಗೆ ನಮಸ್ಕರಿಸುವ ಮೂಲಕ ಶುಭಾಶಯ ಹೇಳಿದರು. 
ಈ ವೇಳೆ ಲೋಕಸಭಾ ಜನಶಕ್ತಿ ಪಾರ್ಟಿ ಸದಸ್ಯ ರಾಮಚಂದ್ರ ಪಾಸ್ವನ್ ಅವರು ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿ ಗೌರವ ಸಲ್ಲಿಸಿದರು. ಇನ್ನು ಮೋದಿ ಸದನಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಸಂಸದರು ಎದ್ದು ನಿಂತು ಗೌರವ ಸಲ್ಲಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com