ಧರ್ಮವನ್ನು ತ್ಯಜಿಸಿ ನಾಸ್ತಿಕರಾಗಿ ಇಲ್ಲವೇ ಶಿಕ್ಷೆ ಎದುರಿಸಿ, ಸದಸ್ಯರಿಗೆ ಚೀನಾ ಕಮ್ಯುನಿಷ್ಟ್ ಪಕ್ಷದ ಸೂಚನೆ

"ಧರ್ಮವನ್ನು ತ್ಯಜಿಸಿ ನಾಸ್ತಿಕರಾಗಿ ಇಲ್ಲವೇ ಶಿಕ್ಷೆ ಎದುರಿಸಿ" ಇಂತಹದ್ದೊಂದು ಸೂಚನೆಯನ್ನು ಚೀನಾದ ಕಮ್ಯುನಿಷ್ಟ್ ಪಕ್ಷ ತನ್ನ ಸದಸ್ಯರಿಗೆ ನೀಡಿದೆ.
ಚೀನಾ, ಕಮ್ಯುನಿಷ್ಟ್ ಪಕ್ಷ
ಚೀನಾ, ಕಮ್ಯುನಿಷ್ಟ್ ಪಕ್ಷ
ನವದೆಹಲಿ: "ಧರ್ಮವನ್ನು ತ್ಯಜಿಸಿ ನಾಸ್ತಿಕರಾಗಿ ಇಲ್ಲವೇ ಶಿಕ್ಷೆ ಎದುರಿಸಿ" ಇಂತಹದ್ದೊಂದು ಸೂಚನೆಯನ್ನು ಚೀನಾದ ಕಮ್ಯುನಿಷ್ಟ್ ಪಕ್ಷ ತನ್ನ ಸದಸ್ಯರಿಗೆ ನೀಡಿದೆ. 
ಗ್ಲೋಬಲ್ ಟೈಮ್ಸ್ ಪ್ರಕಾರ, ಚೀನಾದ ಧಾರ್ಮಿಕ ವ್ಯವಹಾರಗಳ ನಿಯಂತ್ರಕ ಚೀನಾ ಕಮ್ಯುನಿಷ್ಟ್ ಪಕ್ಷದ ಸದಸ್ಯರು ಧರ್ಮವನ್ನು ತ್ಯಜಿಸಿ, ಅಪ್ಪಟ ಮಾರ್ಕ್ಸ್ ವಾದದ ಪ್ರಕಾರ ನಾಸ್ತಿಕರಾಗಬೇಕು, ಇಲ್ಲವೇ ಶಿಕ್ಷೆ ಎದುರಿಸಬೇಕು ಎಂದು ಹೇಳಿದೆ. 
ಚೀನಾದ ಕಮ್ಯುನಿಷ್ಟ್ ಪಕ್ಷ ನಾಸ್ತಿಕವಾದಿಯಾಗಿದ್ದರೂ, ಅಲ್ಲಿನ ಸಂವಿಧಾನ ಧಾರ್ಮಿಕ ನಂಬಿಕೆ, ಆಚರಣೆಗಳ ಸ್ವಾತಂತ್ರ್ಯವನ್ನು ನೀಡಿದೆ. ಪಕ್ಷದ ಸದಸ್ಯರು ಯಾರೂ ಧಾರ್ಮಿಕ ನಂಬಿಕೆಗಳನ್ನು ಹೊಂದಿರಬಾರದು ಎಂದು ಧಾರ್ಮಿಕ ವ್ಯವಹಾರಗಳ ನಿರ್ದೇಶಕ ವಾಂಗ್ ಜುವಾನ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. 
ಪಕ್ಷದ ಫ್ಲಾಗ್ ಶಿಪ್ ನಿಯತಕಾಲಿಕೆಯಲ್ಲಿ ಧಾರ್ಮಿಕ ವ್ಯವಹಾರಗಳ ನಿರ್ದೇಶಕರ ಸೂಚನೆಯನ್ನು ಪ್ರಕಟಿಸಲಾಗಿದೆ. ಒಂದು ವೇಳೆ ಯಾರಾದರೂ ಧಾರ್ಮಿಕ ವ್ಯವಹಾರಗಳಲ್ಲಿ ತೊಡಗಿಕೊಂಡರೆ ಅಂತಹ ಸದಸ್ಯರನ್ನು ಉಚ್ಚಾಟನೆ ಮಾಡಲಾಗುವುದು ಎಂದು ಧಾರ್ಮಿಕ ವ್ಯವಹಾರಗಳ ನಿಯಂತ್ರಣ ವಿಭಾಗದ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com