ಇಂದು ರಾಷ್ಟ್ರಪತಿ ಚುನಾವಣೆ ಫಲಿತಾಂಶ: ಮೀರಾ ಕುಮಾರ್, ಕೋವಿಂದ್ ಭವಿಷ್ಯ ನಿರ್ಧಾರ

ಜುಲೈ 17 ರಂದು ನಡೆದ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯಲಿದೆ...
ರಾಮ್ ನಾಥ್ ಕೋವಿಂದ್ ಮತ್ತು ಮೀರಾ ಕುಮಾರ್
ರಾಮ್ ನಾಥ್ ಕೋವಿಂದ್ ಮತ್ತು ಮೀರಾ ಕುಮಾರ್
Updated on
ನವದೆಹಲಿ: ಜುಲೈ 17 ರಂದು ನಡೆದ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯಲಿದೆ. 
ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಮತ್ತು ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಮೀರಾ ಕುಮಾರ್‌ ನಡುವಣ ಸ್ಪರ್ಧೆಯ ಫಲಿತಾಂಶ ಸಂಜೆ 5 ಗಂಟೆ ವೇಳೆಗೆ ಪ್ರಕಟವಾಗಲಿದೆ.
ಬೆಳಗ್ಗೆ 11 ಗಂಟೆಗೆ ಸಂಸತ್ತಿನ ಮೊದಲ ಮಹಡಿಯ 62ನೇ ಕೊಠಿಯಲ್ಲಿ ಮತಎಣಿಕೆ ಆರಂಭವಾಗಲಿದೆ. ಎಲ್ಲ ರಾಜ್ಯಗಳಿಂದ ಮತಪೆಟ್ಟಿಗೆಗಳು ಮಂಗಳವಾರವೇ ಸಂಸತ್‌ ಭವನಕ್ಕೆ ತಲುಪಿವೆ.  
ಸಂಸತ್ ಭವನ ಸೇರಿ ಒಟ್ಟು 32 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು,  ಭಾರತದ 14ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಶೇ.99 ರಷ್ಚು ಮತದಾನವಾಗಿತ್ತು. 15 ರಾಜ್ಯಗಳಲ್ಲಿ ಶೇ. 100 ರಷ್ಚು ಮತದಾನವಾಗಿತ್ತು.

ಮೊದಲಿಗೆ ಸಂಸತ್ ಭವನದಲ್ಲಿ ನಡೆದ ಮತದಾನದ ಮತಗಳನ್ನು ಎಣಿಕೆ ಮಾಡಲಾಗುವುದು. ನಂತರ ಇಂಗ್ಲಿಷ್ ವರ್ಣಮಾಲೆ ಆಧಾರದಂತೆ ರಾಜ್ಯಗಳ ಮತ ಎಣಿಕೆ ಕಾರ್ಯ ನಡೆಯಲಿದೆ.

4,120 ಶಾಸಕರು ಹಾಗೂ 776 ಮಂದಿ ಸಂಸದರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಸಂಸದರ ಮತ ಮೌಲ್ಯ 708 ಆಗಿದ್ದು, ಶಾಸಕರ ಮತ ಮೌಲ್ಯ ಅವರು ಪ್ರತಿನಿಧಿಸುವ ಕ್ಷೇತ್ರದ ಜನಸಂಖ್ಯೆಯನ್ನು ಆಧರಿಸಿರುತ್ತದೆ. 
ಸಾಯಂಕಾಲ ಐದು ಗಂಟೆ ವೇಳೆಗೆ ರಾಷ್ಟ್ರಪತಿ ಭವನದಿಂದ ಅಧಿಕೃತ ಫಲಿತಾಂಶ ಹೊರಬೀಳಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com