ರಾಷ್ಟ್ರಪತಿ ಚುನಾವಣೆ ಫಲಿತಾಂಶ: ರಾಮನಾಥ್ ಕೋವಿಂದ್‌ ಮುನ್ನಡೆ

ಜುಲೈ 17ರಂದು ನಡೆದ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 11ರಿಂದ ಆರಂಭಗೊಂಡಿದ್ದು, ಆಡಳಿತರೂಢ....
ರಾಮನಾಥ್ ಕೋವಿಂದ್‌ - ಮೀರಾ ಕುಮಾರ್
ರಾಮನಾಥ್ ಕೋವಿಂದ್‌ - ಮೀರಾ ಕುಮಾರ್
ನವದೆಹಲಿ: ಜುಲೈ 17ರಂದು ನಡೆದ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 11ರಿಂದ ಆರಂಭಗೊಂಡಿದ್ದು, ಆಡಳಿತರೂಢ ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್‌ ಅವರು 60,683 ಮತಗಳೊಂದಿಗೆ ಭಾರಿ ಮುನ್ನಡೆ ಸಾಧಿಸಿದ್ದಾರೆ.
ರಾಜ್ಯಾವಾರು ಅಕ್ಷರ ಕ್ರಮದಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಅಸ್ಸಾಂ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಬಿಹಾರದಲ್ಲಿ ಮತ ಎಣಿಕೆ ಕಾರ್ಯ ಅಂತ್ಯಗೊಂಡಿದ್ದು, ರಾಮನಾಥ್ ಕೋವಿಂದ್ ಅವರು 60,683 ಮತಗಳನ್ನು ಪಡೆದರೆ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿ ಮೀರಾ ಕುಮಾರ್‌ ಅವರು 22,941 ಮತಗಳನ್ನು ಮತಗಳನ್ನು ಪಡೆದಿರುವುದಾಗಿ ಚುನಾವಣಾ ಅಧಿಕಾರಿ ಅನೂಪ್‌ ಮಿಶ್ರಾ ಅವರು ತಿಳಿಸಿದ್ದಾರೆ. 
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರು, ನಾನು ಅತ್ಯಂತ ವಿಶ್ವಾಸ, ನಂಬಿಕೆ ಹಾಗೂ ಭರವಸೆಯೊಂದಿಗೆ 14ನೇ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಹೇಳಿದ್ದಾರೆ.
ಪ್ರಸ್ತುತ ಅಭ್ಯರ್ಥಿಗಳ ನಡುವೆ 37,742 ಮತಗಳ ಅಂತರವಿದೆ. ಒಟ್ಟು ಎಂಟು ಸುತ್ತುಗಳಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದ್ದು ಸಂಜೆಯ ಹೊತ್ತಿಗೆ ಅಂತಿಮ ಫಲಿತಾಂಶ ಹೊರಬೀಳಲಿದೆ.
ಕಳೆ ಸೋಮವಾರ ಸಂಸತ್ ಭವನ ಸೇರಿ ಒಟ್ಟು 32 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು,  ಭಾರತದ 14ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಶೇ.99 ರಷ್ಚು ಮತದಾನವಾಗಿತ್ತು. 15 ರಾಜ್ಯಗಳಲ್ಲಿ ಶೇ. 100 ರಷ್ಚು ಮತದಾನವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com