ತಮ್ಮನ್ನು ಹಿಟ್ಲರ್ ರೀತಿ ಬಿಂಬಿಸಿದ ಕಾಂಗ್ರೆಸ್ ಪೋಸ್ಟರ್ ವಿರುದ್ಧ ಕಿರಣ್ ಬೇಡಿ ಕಿಡಿ

ಪುದುಚೆರಿ ಕಾಂಗ್ರೆಸ್ ಸರ್ಕಾರ ಹಾಗೂ ಅಲ್ಲಿನ ಲೆಫ್ಟಿನೆಂಟ್ ಗೌರ್ನರ್ ಕಿರಣ್ ಬೇಡಿ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಕಿರಣ್ ಬೇಡಿ ಅವರನ್ನು ಹಿಟ್ಲರ್ ರೀತಿ ಬಿಂಬಿಸಿ ಕಾಂಗ್ರೆಸ್ ಪಕ್ಷ ಪೋಸ್ಟರ್ ಹಾಕಿದೆ.
ಕಿರಣ್ ಬೇಡಿ
ಕಿರಣ್ ಬೇಡಿ
ಪುದುಚೆರಿ: ಪುದುಚೆರಿ ಕಾಂಗ್ರೆಸ್ ಸರ್ಕಾರ ಹಾಗೂ ಅಲ್ಲಿನ ಲೆಫ್ಟಿನೆಂಟ್ ಗೌರ್ನರ್ ಕಿರಣ್ ಬೇಡಿ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಕಿರಣ್ ಬೇಡಿ ಅವರನ್ನು ಹಿಟ್ಲರ್ ರೀತಿ ಬಿಂಬಿಸಿ ಕಾಂಗ್ರೆಸ್ ಪಕ್ಷ ಪೋಸ್ಟರ್ ಹಾಕಿದೆ. ಈ ಬಗ್ಗೆ ಕಿರಣ್ ಬೇಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಕಿರಣ್ ಬೇಡಿ, ತಮ್ಮನ್ನು ಹಿಟ್ಲರ್ ಮಾದರಿಯಲ್ಲಿ ಚಿತ್ರಿಸಿರುವ ಪೋಸ್ಟರ್ ನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಇದು ಸ್ಥಳೀಯ ಕಾಂಗ್ರೆಸ್ ಘಟಕದ ಕೆಲಸ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಕಿರಣ್ ಬೇಡಿ ವಿರುದ್ಧದ ಆಕ್ರೋಶಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಕಿರಣ್ ಬೇಡಿ ಆರೋಪಿಸಿದ್ದಾರೆ. 
ಪುದುಚೆರಿಯ ಮೂವರು ನಾಮನಿರ್ದೇಶಿತ ವಿಧಾನಸಭೆಯ ಸದಸ್ಯರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿರುವುದರ ವಿರುದ್ಧ ಕಾಂಗ್ರೆಸ್ ನ ನಾಯಕರು ಹಾಗೂ ಮುಖ್ಯಮಂತ್ರಿ ವಿ ನಾರಾಯಣ ಸ್ವಾಮಿ ಪ್ರತಿಭಟನೆ ನಡೆಸಿದ್ದರು. ಪುದುಚೆರಿ ಲೆಫ್ಟಿನೆಂಟ್ ಗೌರ್ನರ್ ಅವರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಕಾಂಗ್ರೆಸ್ ಆಗ್ರಹಿಸಿದ್ದು, ಕಿರಣ್ ಬೇಡಿ ಅವರನ್ನು ಹಿಟ್ಲರ್ ರೀತಿಯಲ್ಲಿ ಚಿತ್ರಿಸಿರುವ ಪೋಸ್ಟರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com