ನೋಬೆಲ್ ಶಾಂತಿ ಪ್ರಶಸ್ತಿಯನ್ನು ರದ್ದುಗೊಳಿಸಬೇಕು: ಚೀನಾ ಮಾಧ್ಯಮ

ನೋಬೆಲ್ ಶಾಂತಿ ಪ್ರಶಸ್ತಿಯನ್ನು ರದ್ದುಗೊಳಿಸಬೇಕು ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಅಭಿಪ್ರಾಯಪಟ್ಟಿದೆ.
ಚೀನಾ ಮಾಧ್ಯಮ
ಚೀನಾ ಮಾಧ್ಯಮ
ಬೀಜಿಂಗ್: ನೋಬೆಲ್ ಶಾಂತಿ ಪ್ರಶಸ್ತಿಯನ್ನು ರದ್ದುಗೊಳಿಸಬೇಕು ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಅಭಿಪ್ರಾಯಪಟ್ಟಿದೆ. 
ನೋಬೆಲ್ ಶಾಂತಿ ಪ್ರಶಸ್ತಿ ರಾಜಕೀಯ ಲಾಭಿಯಾಗಿ ಪರಿಣಮಿಸಿದ್ದು, ಪಾಶ್ಚಿಮಾತ್ಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ಆರೋಪಿಸಿದ್ದು, ನೋಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾದ ಬಹುತೇಕರು ಪಶ್ಚಿಮ ಯುರೋಪ್ ಅಥವಾ ಉತ್ತರ ಅಮೆರಿಕಾದವರಾಗಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. 
ಚೀನಾದ ನೋಬೆಲ್ ಪ್ರಶಸ್ತಿ ವಿಜೇತ ಭಿನ್ನಮತೀಯ ಲಿಯು ಕ್ಸಿಯಾಬೊ ಕ್ಯಾನ್ಸರ್ ನಿಂದ ಮೃತಪಟ್ಟ ಕೆಲವೇ ವಾರಗಳಲ್ಲಿ ಚೀನಾ ನೋಬೆಲ್ ಪ್ರಶಸ್ತಿ ಬಗ್ಗೆ ಲೇಖನ ಪ್ರಕಟಿಸಿದ್ದು, ನೋಬೆಲ್ ಶಾಂತಿ ಪ್ರಶಸ್ತಿಯನ್ನು ರದ್ದುಗೊಳಿಸಬೇಕು ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com