ರಮಣ್ ಸಿಂಗ್
ರಮಣ್ ಸಿಂಗ್

ನೋಟು ನಿಷೇಧ ನಕ್ಸಲ್ ಚಟುವಟಿಕೆಗಳಿಗೆ ಹೊಡೆತ ನೀಡಿದೆ: ರಮಣ್ ಸಿಂಗ್

ಛತ್ತೀಸ್ ಗಢದಲ್ಲಿ ನಕ್ಸಲ್ ಚಟುವಟಿಕೆಗಳು ಗಣನೀಯವಾಗಿ ಇಳಿಕೆಯಾಗಿದ್ದು, 500, 1000 ರೂಗಳ ನೋಟು ನಿಷೇಧ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಸಿಎಂ ರಮಣ್ ಸಿಂಗ್ ಹೇಳಿದ್ದಾರೆ.
ನವದೆಹಲಿ:  ಛತ್ತೀಸ್ ಗಢದಲ್ಲಿ ನಕ್ಸಲ್ ಚಟುವಟಿಕೆಗಳು ಗಣನೀಯವಾಗಿ ಇಳಿಕೆಯಾಗಿದ್ದು, 500, 1000 ರೂಗಳ ನೋಟು ನಿಷೇಧ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಸಿಎಂ ರಮಣ್ ಸಿಂಗ್ ಹೇಳಿದ್ದಾರೆ.
ನಕ್ಸಲ್ ಚಟುವಟಿಕೆಗಳು ಈಗ ಸಣ್ಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ. ನೋಟು ನಿಷೇಧ ಮಾವೋವಾದಿಗಳ ಬೆನ್ನೆಲುಬನ್ನು ಮುರಿದಿದೆ. ನಕ್ಸಲ್ ಚಟುವಟಿಕೆಗಳನ್ನು ಮತ್ತಷ್ಟು ನಿಗ್ರಹಿಸುವುದಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ರಮಣ್ ಸಿಂಗ್ ಹೇಳಿದ್ದಾರೆ. 
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ವೇಳೆ ರಮಣ್ ಸಿಂಗ್ ಈ ಹೇಳಿಕೆ ನೀಡಿದ್ದು, ಬಸ್ತಾರ್ ಪ್ರದೇಶದ ಜನತೆ ಶಾಂತಿಯನ್ನು ಬಯಸುತ್ತಿದ್ದಾರೆ. ಬಸ್ತಾರ್ ಪ್ರದೇಶದ ಅಭಿವೃದ್ಧಿಗಾಗಿ 3000 ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಬಸ್ತಾರ್ ಬದಲಾವಣೆಗೆ ತೆರೆದುಕೊಳ್ಳುತ್ತಿದೆ ಎಂದು ರಮಣ್ ಸಿಂಗ್ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com