ವಿದೇಶಾಂಗ ಇಲಾಖೆ ವಕ್ತಾರರಾಗಿ ಗೋಪಾಲ್ ಬಾಗ್ಲೆ ಬದಲಿಗೆ ರವೀಶ್ ಕುಮಾರ್

ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರವೀಶ್ ಕುಮಾರ್ ವಿದೇಶಾಂಗ....
ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರವೀಶ್ ಕುಮಾರ್
ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರವೀಶ್ ಕುಮಾರ್
ನವದೆಹಲಿ: ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರವೀಶ್ ಕುಮಾರ್ ವಿದೇಶಾಂಗ ಸಚಿವಾಲಯದ ಮುಂದಿನ ವಕ್ತಾರರಾಗಿ ನೇಮಕಗೊಳ್ಳಲಿದ್ದಾರೆ.
ಹಿರಿಯ ರಾಯಭಾರಿ ಮತ್ತು ಪ್ರಸ್ತುತ ವಿದೇಶಾಂಗ ಸಚಿವಾಲಯದ ವಕ್ತಾರರಾಗಿರುವ ಗೋಪಾಲ್ ಬಗ್ಲೆ ಅವರು ಪ್ರಧಾನ ಮಂತ್ರಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿಯಾಗಿ ನಿನ್ನೆ ನೇಮಕಗೊಂಡಿರುವುದರಿಂದ ಅವರ ಸ್ಥಾನಕ್ಕೆ ರವೀಶ್ ಕುಮಾರ್ ನೇಮಕಗೊಳ್ಳಲಿದ್ದಾರೆ.
ಪ್ರಧಾನಿ ಕಚೇರಿಯ ಜಂಟಿ ಕಾರ್ಯದರ್ಶಿಯಾಗಿ ಬಗ್ಲೆ 5 ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದರು. ಕೇಂದ್ರ ಸಂಪುಟದ ನೇಮಕ ಸಮಿತಿ ಬಗ್ಲೆಯವರ ನೇಮಕಕ್ಕೆ 3 ವರ್ಷಗಳ ಹಿಂದೆ ಅನುಮೋದನೆ ನೀಡಿತ್ತು ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಗೋಪಾಲ್ ಬಗ್ಲೆ 1992 ರ ಬ್ಯಾಚ್ ನ ಭಾರತೀಯ ವಿದೇಶ ಸೇವಾ ಇಲಾಖೆ ಅಧಿಕಾರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com