ಗೋರ್ಖಾ ಜನಮುಕ್ತಿ ಮೋರ್ಚ
ದೇಶ
ಜಿಜೆಎಂ ಮಾವೋವಾದಿಗಳೊಂದಿಗೆ ಭೂಗತ ಸಶಸ್ತ್ರ ಚಳುವಳಿಗೆ ಸಜ್ಜಾಗುತ್ತಿದೆ: ಪ.ಬ ಪೊಲೀಸ್
ಗೋರ್ಖಾ ಜನಮುಕ್ತಿ ಮೋರ್ಚ ಮಾವೋವಾದಿಗಳ ಸಹಾಯ ಪಡೆದು, ಸಶಸ್ತ್ರ ಚಳುವಳಿಗೆ ಸಜ್ಜಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಾರ್ಜಿಲಿಂಗ್: ಗೋರ್ಖಾ ಜನಮುಕ್ತಿ ಮೋರ್ಚ ಮಾವೋವಾದಿಗಳ ಸಹಾಯ ಪಡೆದು, ಸಶಸ್ತ್ರ ಚಳುವಳಿಗೆ ಸಜ್ಜಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಜೆಎಂ ಹೊರದೇಶಗಳ ಮಾವೋವಾದಿಗಳ ನೆರವಿನಿಂದ ಸಶಸ್ತ್ರ ಚಳುವಳಿಗೆ ಸಜ್ಜಾಗುತ್ತಿದ್ದು, ಅವರಿಂದ ಜಿಜೆಎಂ ಪಡೆಗೆ ತರಬೇತಿ ಕೊಡಿಸುತ್ತಿರುವುದರ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಶ್ಚಿಮ ಬಂಗಾಳ ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ತಳ್ಳಿಹಾಕಿರುವ ಜಿಜೆಎಂ, ಅಧಿಕಾರಿಗಳ ಆರೋಪ ನಿರಾಧಾರವಾದದ್ದು, ನಮ್ಮ ಪ್ರಜಾಸತ್ತಾತ್ಮಕ ಚಳುವಳಿಯನ್ನು ಕುಗ್ಗಿಸಲು ಈ ರೀತಿಯ ಆರೋಪ ಹೊರಿಸಲಾಗುತ್ತಿದೆ ಎಂದು ಜಿಜೆಎಂ ನ ಪ್ರಧಾನ ಕಾರ್ಯದರ್ಶಿ ರೋಷನ್ ಗಿರಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಹಿರಿಯ ಅಧಿಕಾರಿಯ ಪ್ರಕಾರ, ಜಿಜೆಎಂ ತನ್ನ ಕಾರ್ಯಕರ್ತರಿಗೆ ತರಬೇತಿ ಕೊಡಿಸಲು 25-30 ಮಾವೋವಾದಿಗಳನ್ನು ಹೊರದೇಶಗಳಿಂದ ಕರೆಸಿಕೊಂಡಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿದೆ. ಸಶಸ್ತ್ರ ಹೋರಾಟ ಪ್ರಾರಂಭವಾದರೆ ಅಂತಹ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲೂ ಸಿದ್ಧಗೊಂಡಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ