ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ಪದವಿ ಸ್ವೀಕರಿಸಿಕೊಂಡ ರಾಮ್ ನಾಥ್ ಕೋವಿಂದ್ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು.
ತಮ್ಮ ಸಂತೋಷವನ್ನು ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿದ ಅವರು, ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ರಾಮನಾಥ್ ಕೋವಿಂದ್ ಅವರಿಗೆ ಅಭಿನಂದನೆಗಳು ಎಂದು ಹೇಳಿದರು.
ನಂತರ ರಾಷ್ಟ್ರಪತಿಯವರ ಪದವಿ ಸ್ವೀಕಾರದ ಭಾಷಣ ಸ್ಫೂರ್ತಿದಾಯಕವಾಗಿತ್ತು. ಭಾರತದ ಶಕ್ತಿಗಳು, ಪ್ರಜಾಪ್ರಭುತ್ವ ಮತ್ತು ವೈವಿದ್ಯತೆಯ ಮೂಲಭೂತದ ಸಾರಸಂಗ್ರಹವಾಗಿ ನೂತನ ರಾಷ್ಟ್ರಪತಿಗಳ ಭಾಷಣ ಮೂಡಿಬಂದಿದೆ ಎಂದು ಹೇಳಿದರು.
Congratulations to Shri Ram Nath Kovind ji on taking oath as the President of India. @RashtrapatiBhvn