ಸೆ.7ರೊಳಗೆ 1,500 ಕೋಟಿ ರು.ಜಮೆ ಮಾಡಿ: ಸಹರಾ ಮುಖ್ಯಸ್ಥನಿಗೆ ಸುಪ್ರೀಂ ಸೂಚನೆ

ಸೆಪ್ಟೆಂಬರ್ 7ರೊಳಗೆ ಸೆಬಿ-ಸಹರಾ ಮರುಪಾವತಿ ಖಾತೆಗೆ 1,500 ಕೋಟಿ ರುಪಾಯಿ ಜಮೆ ಮಾಡುವಂತೆ ಸಹಾರಾ ಸಮೂಹ....
ಸುಬ್ರತಾ ರಾಯ್
ಸುಬ್ರತಾ ರಾಯ್
ನವದೆಹಲಿ: ಸೆಪ್ಟೆಂಬರ್ 7ರೊಳಗೆ ಸೆಬಿ-ಸಹರಾ ಮರುಪಾವತಿ ಖಾತೆಗೆ 1,500 ಕೋಟಿ ರುಪಾಯಿ ಜಮೆ ಮಾಡುವಂತೆ ಸಹಾರಾ ಸಮೂಹ ಕಂಪನಿಗಳ ಮುಖ್ಯಸ್ಥ ಸುಬ್ರತಾ ರಾಯ್‌ ಅವರಿಗೆ ಮಂಗಳವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ. 
ಜುಲೈ 15ರೊಳಗೆ ಸೆಬಿ ಖಾತೆಗೆ ಜಮೆ ಮಾಡಬೇಕಿದ್ದ 552.21 ಕೋಟಿ ರುಪಾಯಿಗಳ ಪೈಕಿ 247 ಕೋಟಿ ರು.ಜಮೆ ಮಾಡಲಾಗಿದೆ. ಉಳಿದ 305.21 ಕೋಟಿ ರುಪಾಯಿಯನ್ನು ಆಗಸ್ಟ್ 12ರೊಳಗೆ ಜಮೆ ಮಾಡುವುದಾಗಿ ಎಂದು ರಾಯ್ ಪರ ವಕೀಲ ಕಪಿಲ್ ಸಿಬಲ್ ಅವರು ಇಂದು ಕೋರ್ಟ್ ಗೆ ತಿಳಿಸಿದರು.
ರಾಯ್ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ದೀಪಕ್ ಮಿಸ್ರಾ ನೇತೃತ್ವದ ತ್ರಿಸದಸ್ಯ ಪೀಠ, ಬಾಕಿ 305 ಕೋಟಿ ಸೇರಿದಂತೆ ಸೆಪ್ಟೆಂಬರ್ 7ರೊಳಗೆ ಒಟ್ಟು 1,500 ಕೋಟಿ ಜಮೆ ಮಾಡುವಂತೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ.
ವಸತಿ ಯೋಜನೆ ಹೆಸರಿನಲ್ಲಿ ಸಾರ್ವಜನಿಕ ಹೂಡಿಕೆದಾರರನ್ನು ವಂಚಿಸಿ, ಹೂಡಿಕೆ ಹಣ ಹಿಂದಿರುಗಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜಾಮೀನುರಹಿತ ವಾರಂಟ್ ಹೊರಡಿಸಿ ಬಂಧನಕ್ಕೆ ಆದೇಶ ನೀಡಿತ್ತು. ಇದಾದ ಬಳಿಕ ತಲೆಮರೆಸಿಕೊಂಡಿದ್ದ ಸುಬ್ರತಾರಾಯ್ ಅವರು ಲಖನೌದಲ್ಲಿ ಪೊಲೀಸರ ಎದುರು ಶರಣಾಗಿ ಜೈಲು ಪಾಲಾಗಿದ್ದರು. 
2014ರಲ್ಲಿ ಬಂಧಿತರಾಗಿದ್ದ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಈಗ ಪೆರೋಲ್ ಮೇಲೆ ಹೊರ ಬಂದಿದ್ದು, ಇತ್ತೀಚಿಗಷ್ಟೆ ಸುಪ್ರೀಂಕೋರ್ಟ್ ಪರೋಲ್ ಅವಧಿಯನ್ನು ಅಕ್ಟೋಬರ್ 10ರವರೆಗೆ ವಿಸ್ತರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com