2,000 ರೂ ನೋಟು ಬಂದ್ ಬಗ್ಗೆ ವಿಪಕ್ಷಗಳಿಗೆ ಉತ್ತರಿಸಲು ಜೇಟ್ಲಿ ನಕಾರ

ಕೇಂದ್ರ ಸರ್ಕಾರ 2,000 ರೂ ನೋಟುಗಳನ್ನು ನಿಷೇಧಿಸಲಿದೆಯೇ ಎಂಬ ವಿಪಕ್ಷಗಳ ಪ್ರಶ್ನೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಉತ್ತರಿಸಲು ನಿರಾಕರಿಸಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ಕೇಂದ್ರ ಸರ್ಕಾರ 2,000 ರೂ ನೋಟುಗಳನ್ನು ನಿಷೇಧಿಸಲಿದೆಯೇ ಎಂಬ ವಿಪಕ್ಷಗಳ ಪ್ರಶ್ನೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಉತ್ತರಿಸಲು ನಿರಾಕರಿಸಿದ್ದಾರೆ. 
ಸಂಸತ್ ಅಧಿವೇಶನದ ಕಲಾಪದ ಶೂನ್ಯ ವೇಳೆಯಲ್ಲಿ ರಾಜ್ಯಸಭಾ ಸದಸ್ಯ, ವಿಪಕ್ಷ ನಾಯಕ ಗುಲಾಮ್ ನಭಿ ಆಜಾದ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದು, 1000 ರೂ ನೋಟಿನಂತೆಯೇ 2000 ರೂ ನೋಟುಗಳನ್ನೂ ಕೇಂದ್ರ ಸರ್ಕಾರ ನಿಷೇಧಿಸಲಿದೆಯೇ ಎಂದು ಕೇಳಿದ್ದಾರೆ. 
ಕೇಂದ್ರ ಸರ್ಕಾರ 2,000 ರೂ ನೋಟುಗಳನ್ನು ನಿಷೇಧಿಸಿ 1,000, 100, 200 ರೂ ನಾಣ್ಯಗಳನ್ನು ಚಲಾವಣೆಗೆ ತರಲು ಉದ್ದೇಶಿಸಿದೆ ಎಂಬ ವರದಿಗಳನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇವೆ, ಇದು ನಿಜವೇ ಎಂಬ ಬಗ್ಗೆ ವಿತ್ತ ಸಚಿವರು ಸ್ಪಷ್ಟನೆ ನೀಡಬೇಕೆಂದು ಗುಲಾಂ ನಬಿ ಆಜಾದ್ ಆಗ್ರಹಿಸಿದರು. 
ವಿಪಕ್ಷಗಳಿಗೆ ಉತ್ತರಿಸಲು ವಿತ್ತ ಸಚಿವ ಅರುಣ್ ಜೇಟ್ಲಿ ನಿರಾಕರಿಸಿದ್ದು, ವಿತ್ತ ಸಚಿವರು ಉತ್ತರಿಸುವುದಿಲ್ಲ ಎಂದು ಸದನಕ್ಕೆ ಉಪಸಭಾಧ್ಯಕ್ಷ ಪಿಜೆ ಕುರಿಯನ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com