ಈ ತಿಂಗಳ ಆರಂಭದಲ್ಲಿ ಏರ್ ಇಂಡಿಯಾ ಸ್ಥಳೀಯ ವಿಮಾನಗಳಲ್ಲಿ ಎಕಾನಮಿ ಕ್ಲಾಸ್ ನ ಪ್ರಯಾಣಿಕರಿಗೆ ಮಾಂಸಾಹಾರ ನೀಡುವುದನ್ನು ನಿಲ್ಲಿಸಲು ನಿರ್ಧರಿಸಿತ್ತು. ಭಾರತ ಸರ್ಕಾರ ಧಾರ್ಮಿಕ ತತ್ವಗಳನ್ನು ವಿಮಾನಗಳಲ್ಲಿಯೂ ಪ್ರಚಾರ ಮಾಡುತ್ತದೆ ಎಂದು ಕೆಲವರು ಈ ನಡೆಯನ್ನು ವಿರೋಧಿಸಿದ್ದರು. ಆದರೆ ವೆಚ್ಚವನ್ನು ಕಡಿತಗೊಳಿಸಲು ಏರ್ ಇಂಡಿಯಾ ಈ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿತ್ತು.