ಭಾರತೀಯ ಸೇನೆ
ದೇಶ
ಕಾಶ್ಮೀರ: ಒಳನುಸುಳುವಿಕೆ ವಿಫಲಗೊಳಿಸಿದ ಸೇನೆ; ಮೂವರು ಭಯೋತ್ಪಾದಕರ ಹತ್ಯೆ
ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುರೆಜ್ ಸೆಕ್ಟರ್ ನಲ್ಲಿ ಒಳನುಸುಳಲು ಯತ್ನಿಸುತ್ತಿದ್ದ 3 ಉಗ್ರವಾದಿಗಳನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.
ಶ್ರೀನಗರ: ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುರೆಜ್ ಸೆಕ್ಟರ್ ನಲ್ಲಿ ಒಳನುಸುಳಲು ಯತ್ನಿಸುತ್ತಿದ್ದ 3 ಉಗ್ರವಾದಿಗಳನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.
ರಕ್ಷಣಾ ಇಲಾಖೆಯ ವಕ್ತಾರರ ಪ್ರಕಾರ ಎಲ್ ಒಸಿಯಲ್ಲಿ ಸೇನಾ ಪಡೆಗಳು ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ಗುರುತಿಸಿದ್ದಾರೆ. ತಕ್ಷಣವೇ ಗುಂಡಿನ ಕಾಳಗ ಪ್ರಾರಂಭವಾಗಿದ್ದು, ಮೂವರು ಉಗ್ರರನ್ನು ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಉಗ್ರರನ್ನು ಹೊಡೆದುರುಳಿಸಿದ ನಂತರವೂ ಕಾರ್ಯಾಚರಣೆ ಮುಂದುವರೆದಿದೆ.


