ಒಂದು ಕುಟುಂಬಕ್ಕಾಗಿ ಮತ ಹಾಕಿಲ್ಲ, ಬಿಹಾರ ಜನತೆ ಸೇವೆ ಮಾಡಲು ಮತ ನೀಡಿದ್ದಾರೆ: ನಿತೀಶ್ ಕುಮಾರ್

ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಬಳಿಕ ಮಾಜಿ ಮಿತ್ರ ಪಕ್ಷ ಹಾಗೂ ಹಾಲಿ ಪ್ರತಿಪಕ್ಷ ಆರ್ ಜೆಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ...
ನಿತೀಶ್ ಕುಮಾರ್
ನಿತೀಶ್ ಕುಮಾರ್
ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಬಳಿಕ ಮಾಜಿ ಮಿತ್ರ ಪಕ್ಷ ಹಾಗೂ ಹಾಲಿ ಪ್ರತಿಪಕ್ಷ ಆರ್ ಜೆಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಬಿಹಾರ ಜನತೆ ಒಂದು ಕುಟುಂಬಕ್ಕಾಗಿ ಮತ ಹಾಕಿಲ್ಲ. ಜನತೆಯ ಸೇವೆ ಮಾಡಲು ಮತ ನೀಡಿದ್ದಾರೆ ಎಂದು ಶುಕ್ರವಾರ ಹೇಳಿದ್ದಾರೆ.
ಇಂದು ವಿಧಾಸಭೆಯಲ್ಲಿ ವಿಶ್ವಾಸಮತ ಮೇಲಿನ ಚರ್ಚೆಯ ವೇಳೆ ಮಾತನಾಡಿದ ನಿತೀಶ್ ಕುಮಾರ್ ಅವರು, ತಮ್ಮ ವಿರುದ್ಧ ಎಲ್ಲಾ ಆರೋಪಗಳಿಗೂ ಸೂಕ್ತ ಸಮಯದಲ್ಲಿ ಉತ್ತರ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಮಾತನಾಡಿದವರಿಗೆ ಕನ್ನಡಿ ತೋರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಿಹಾರ ಜನತೆಯ ಸೇವೆ ಮಾಡಲು ಜನಾದೇಶ ಇದೆ. ಒಂದು ಕುಟುಂಬ ಅಧಿಕಾರದ ಮೂಲಕ ಲಾಭ ಮಾಡಿಕೊಳ್ಳಲು ಅಲ್ಲ. ಜನತಾ ನ್ಯಾಯಾಲಯ ಅತಿ ದೊಡ್ಡ ಕೋರ್ಟ್ ಆಗಿದ್ದು, ಅವರು ನೀಡಿದ ತೀರ್ಪನ್ನು ಗೌರವಿಸಿ ಜನ ಸೇವೆ ಮಾಡುವುದು ನಮ್ಮ ಕರ್ತವ್ಯ. ಆದರೆ ಒಂದು ಕುಟುಂಬಕ್ಕಾಗಿ ಸೇವೆ ಮಾಡಲು ನಾನು ಸಿದ್ಧನಿಲ್ಲ ಎಂದು ನಿತೀಶ್ ಕುಮಾರ್ ಪರೋಕ್ಷವಾಗಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಾತ್ಯಾತೀತ ಸಿದ್ಧಾಂತದೊಂದಿಗೆ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ ಮತ್ತು ಜಾತ್ಯಾತೀತತೆಯ ಬಗ್ಗೆ ನನಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಪರಿಸ್ಥಿತಿ ಏನೆಂದು ನನಗೆ ಚೆನ್ನಾಗಿ ತಿಳಿದಿದೆ ಎಂದು ಬಿಹಾರ ಸಿಎಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com