ದೇಶ ಕಾಯುವ ಯೋಧರಿಗೆ ಮನುಷ್ಯತ್ವ ಒಂದೇ ಧರ್ಮ: ನಮಾಜ್ ಮಾಡುವ ಯೋಧನಿಗೆ ಹಿಂದು ಯೋಧನ ಬೆಂಗಾವಲು

ದೇಶದ ಹಿತಾಸಕ್ತಿಗೆ ಬಂದರೆ ಗಡಿ ಕಾಯುವ ಯೋಧರಿಗೆ ಯಾವುದೇ ಧರ್ಮವಿಲ್ಲ. ಪ್ರತಿಯೊಂದು ಧರ್ಮದವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ...
ನಮಾಜ್ ಮಾಡುತ್ತಿರುವ ಯೋಧನಿಗೆ ಹಿಂದು ಯೋಧನ ಬೆಂಗಾವಲು
ನಮಾಜ್ ಮಾಡುತ್ತಿರುವ ಯೋಧನಿಗೆ ಹಿಂದು ಯೋಧನ ಬೆಂಗಾವಲು
ದೇಶದ ಹಿತಾಸಕ್ತಿಗೆ ಬಂದರೆ ಗಡಿ ಕಾಯುವ ಯೋಧರಿಗೆ ಯಾವುದೇ ಧರ್ಮವಿಲ್ಲ. ಪ್ರತಿಯೊಂದು ಧರ್ಮದವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 
ಶಾಂತಿ ಕಾಪಾಡುವ ಸಲುವಾಗಿ ಗಡಿಯಲ್ಲಿ ಶಸ್ತ್ರಾಸ್ತ್ರವನ್ನು ಹೊತ್ತು ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಗಸ್ತು ತಿರುಗುತ್ತಿರುತ್ತಾರೆ. ಅಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಸರ್ಜಿತ ಮುಸ್ಲಿಂ ಯೋಧನೊಬ್ಬ ನಮಾಜ್ ಮಾಡುವಾಗ ಹಿಂದು ಯೋಧ ಆತನಿಗೆ ಬೆಂಗಾವಲಾಗಿ ನಿಂತಿರುವ ಫೋಟೋ ಇದೀಗ ವೈರಲ್ ಆಗಿದೆ. 
ಈ ಫೋಟೋ ಬಹು ಭಾವನೆಗಳನ್ನು ಹೊರಹಾಕಿದೆ. ಮಾತಿನಲ್ಲಿ ಹೇಳಬೇಕೆಂದರೇ 'ಇದು ನಿಜವಾದ ಭಾರತ' ಏಕತೆ ಮತ್ತು ಸಾಮರಸ್ಯವನ್ನು ಇಲ್ಲಿ ಕಾಣಬಹುದುದಾಗಿದೆ. ಈ ಫೋಟೋವನ್ನು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com