ನವದೆಹಲಿ: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. .ಆಗಸ್ಟ್ 31 ರ ವರೆಗೆ ಕರ್ತವ್ಯ ನಿರ್ವಹಿಸುವುದಾಗಿ ಹೇಳಿರುವ ಅವರು ವಾಪಸ್ ಅಮೆರಿಕಾಗೆ ತೆರಳಿ ಅಲ್ಲಿ ಬೋಧನಾ ವೃತ್ತಿ ಮುಂದುವರಿಸುವುದಾಗಿ ತಿಳಿಸಿದ್ದಾರೆ..2015ರ ಜನವರಿ 5 ರಂದು ನೀತಿ ಆಯೋಗದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ನಲ್ಲಿ ಮುಖ್ಯ ಆರ್ಥಿಕ ತಜ್ಞರಾಗಿ ಪನಗರಿಯಾ ಈ ಹಿಂದೆ ಕೆಲಸ ಮಾಡಿದ್ದರು..ಜೊತೆಗೆ ವಿಶ್ವ ಬ್ಯಾಂಕ್, ಹಾಗೂ ವರ್ಲ್ಡ್ ಟ್ರೇಡ್ ಆರ್ಗನೈಸನ್ ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos