ಗೋಹತ್ಯೆ ನಿಷೇಧ: ಗೋಮಾಂಸ ಪ್ರಿಯ ಮೇಘಾಲಯ ಬಿಜೆಪಿ ಮುಖಂಡ ಪಕ್ಷಕ್ಕೆ ಗುಡ್ ಬೈ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ದೇಶಾದ್ಯಂತ ಗೋಹತ್ಯೆ ನಿಷೇಧದ ಆದೇಶ ಹೊರಡಿಸಿದ್ದು ಇದರಿಂದ ಅಸಮಾಧಾನಗೊಂಡ...
ಬಿಜೆಪಿ
ಬಿಜೆಪಿ
Updated on: 
ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ದೇಶಾದ್ಯಂತ ಗೋಹತ್ಯೆ ನಿಷೇಧದ ಆದೇಶ ಹೊರಡಿಸಿದ್ದು ಇದರಿಂದ ಅಸಮಾಧಾನಗೊಂಡ ಮೇಘಾಲಯ ಬಿಜೆಪಿ ಮುಖಂಡ ಬರ್ನಾರ್ಡ್ ಮರಕ್ ಪಕ್ಷವನ್ನು ತೊರೆದಿದ್ದಾರೆ. 
ಮೇಘಾಲಯದಲ್ಲಿ ದನದ ಮಾಂಸವೇ ಪ್ರಧಾನ ಆಹಾರವಾಗಿದ್ದು ಆದ್ದರಿಂದ ಗೋಹತ್ಯೆ ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ ಎಂದು ಬರ್ನಾರ್ಡ್ ಮರಕ್ ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. 
ಮರಕ್ ರಾಜಿನಾಮೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಮೇಘಾಲಯ ಉಸ್ತುವಾರಿ ನಳಿನ್ ಕೊಹ್ಲಿ ಹೇಳಿದ್ದು, ಬಿಜೆಪಿ ಶಿಸ್ತಿನ ಪಕ್ಷ, ವೈಯಕ್ತಿಕ ಲಾಭಕ್ಕಾಗಿ ಪಕ್ಷದ ಯಾವುದೇ ಸದಸ್ಯರ ಇಂಥ ವರ್ತನೆಗಳನ್ನು ಸಹಿಸಿಕೊಳ್ಳುವುದಿಲ್ಲ. ಪ್ರಧಾನಿ ಮೋದಿ ಅವರು ಎಲ್ಲರೊಂದಿಗೆ ಅಭಿವೃದ್ಧಿ ಅಜೆಂಡಾದ ಪ್ರಕಾರ ಪಕ್ಷ ನಡೆದುಕೊಳ್ಳಲಿದೆ ಎಂದು ಕೊಹ್ಲಿ ಹೇಳಿದ್ದಾರೆ. 
ಮೇಘಾಲಯದ 80 ವಿಧಾನಸಭಾ ಕ್ಷೇತ್ರಗಳ ಪೈಕಿ ಗರೋ ಪರ್ವತ ಪ್ರದೇಶಗಳಲ್ಲಿ 26 ವಿಧಾನಸಭೆ ಕ್ಷೇತ್ರಗಳಿವೆ. ಕೇಂದ್ರ ಸರ್ಕಾರದ ಗೋ ಮಾರಾಟದ ಮೇಲಿನ ನಿರ್ಬಂಧ ನಿರ್ಧಾರ ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಗರೋದ ಕೆಲವು ಬಿಜೆಪಿ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com