ಸಿಬಿಎಸ್ ಇ 10ನೇ ತರಗತಿ ಫಲಿತಾಂಶ ಪ್ರಕಟ, ಶೇ.90.95ರಷ್ಟು ಪಾಸ್

ಕೇಂದ್ರಿಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ ಸಿ) ಶನಿವಾರ 2017ನೇ ಸಾಲಿನ 10 ನೇ ತರಗತಿಯ ಫಲಿತಾಂಶ ಪ್ರಕಟಿಸಿದ್ದು,....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರಿಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ ಸಿ) ಶನಿವಾರ 2017ನೇ ಸಾಲಿನ 10 ನೇ ತರಗತಿಯ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ ಒಟ್ಟು ಶೇ.90.95ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ಬಾರಿ ಶೇ.5ರಷ್ಚು ಫಲಿತಾಂಶ ಕುಸಿದಿದೆ. 2016ರಲ್ಲಿ ಶೇ.96.21ರಷ್ಟು ಫಲಿತಾಂಶ ದಾಖಲಾಗಿತ್ತು.
ಇಂದು ಪ್ರಕಟಗೊಂಡ ಸಿಬಿಎಸ್ ಇ 10ನೇ ತರಗತಿ ಫಲಿತಾಂಶದಲ್ಲಿ ತ್ರಿವೇಂದ್ರಂ ಮೊದಲ ಸ್ಥಾನ ಪಡೆದಿದ್ದು, ಶೇ,99.85ರಷ್ಟು ಫಲಿತಾಂಶ ಪಡೆದಿದೆ. ಶೇ,99.62 ರಷ್ಟು ಫಲಿತಾಂಶ ಪಡೆದ ಮದ್ರಾಸ್ ಎರಡನೇ ಸ್ಥಾನ ಹಾಗೂ ಶೇ.98.23ರಷ್ಚು ಫಲಿತಾಂಶ ಪಡೆದ ಅಲಹಬಾದ್ ಮೂರನೇ ಸ್ಥಾನದಲ್ಲಿದೆ.
ದೆಹಲಿ ಶೇ.78.9ರಷ್ಚು, ಭುವನೇಶ್ವರ ಶೇ. 92.15ರಷ್ಚು, ಚಂಢೀಗಢ ಶೇ.94.34, ಗುವಾಹತಿ ಶೇ. 65.53, ಪಾಟ್ನಾ ಶೇ.95.50, ಡೆಹ್ರಾಡೂನ್ ಶೇ. 97.27, ಅಜ್ಮೇರ್ ಶೇ, 93.30ರಷ್ಟು ಫಲಿತಾಂಶ ದಾಖಲಿಸಿವೆ. 
ಸಿಬಿಎಸ್ ಇ ಅಧಿಕೃತ ವೆಬ್ ಸೈಟ್ cbse.nic.in ಹಾಗೂ cbseresults.nic.in ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com