10 ನೇ ತರಗತಿ ತೇರ್ಗಡೆಯಾದ 82 ವರ್ಷದ ಓಂ ಪ್ರಕಾಶ್ ಚೌಟಾಲ

10ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ತಮ್ಮ 82 ನೇ ವಯಸ್ಸಿನಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಪಾಸ್ ಮಾಡಿಕೊಂಡಿದ್ದಾರೆ.
ಓಂ ಪ್ರಕಾಶ್ ಚೌಟಾಲ
ಓಂ ಪ್ರಕಾಶ್ ಚೌಟಾಲ
ಚಂಡೀಗಢ: 10ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ತಮ್ಮ 82 ನೇ ವಯಸ್ಸಿನಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಪಾಸ್ ಮಾಡಿಕೊಂಡಿದ್ದಾರೆ. 
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನ ಅಧ್ಯಕ್ಷ ಸಿಬಿ ಶರ್ಮಾ ಪರೀಕ್ಷೆಗಳನ್ನು ನಡೆಸಿದ್ದು, " ನಮ್ಮ ಇನ್ಸ್ಟಿಟ್ಯೂಟ್ ನಿಂದ ಈ ವರ್ಷ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿರುವ ಅತ್ಯಂತ ಹಿರಿಯ ವ್ಯಕ್ತಿ ಚೌಟಾಲ ಎಂದು ಹೇಳಿದ್ದಾರೆ. 
ತಿಹಾರ್ ಜೈಲಿನಲ್ಲಿ ಏ.6 ರಿಂದ ಏ.24 ವರೆಗೆ ನಡೆಸಲಾದ 10 ನೇ ತರಗತಿ ಪರೀಕ್ಷೆಯನ್ನು ಚೌಟಾಲ ಸಹ ಬರೆದಿದ್ದರು ಸಮಾಜ ವಿಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ, ಹಿಂದಿ, ಭಾರತೀಯ ಸಂಸ್ಕೃತಿ, ಪರಂಪರೆ, ಉದ್ಯಮ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದ ಚೌಟಾಲ ಒಟ್ಟು 500 ಅಂಕಗಳಿಗೆ 267 ಅಂಕಗಳನ್ನು ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com