ಉತ್ತರಾಖಂಡ್: ಭಾರತೀಯ ವಾಯುಗಡಿ ಉಲ್ಲಂಘಿಸಿದ ಚೀನಾ ಹೆಲಿಕಾಫ್ಟರ್

ಭಾರತ-ಚೀನಾ ಗಡಿ ಪ್ರದೇಶದಲ್ಲಿ ಚೀನಾ ಭಾರತದ ವಾಯುಗಡಿ ಉಲ್ಲಂಘನೆ ಮಾಡಿರಿಉವ ಬಗ್ಗೆ ವರದಿ ಪ್ರಕಟವಾಗಿದೆ.
ಚೀನಾ ಹೆಲಿಕಾಫ್ಟರ್
ಚೀನಾ ಹೆಲಿಕಾಫ್ಟರ್
Updated on
ಚಿಮೋಲಿ: ಭಾರತ-ಚೀನಾ ಗಡಿ ಪ್ರದೇಶದಲ್ಲಿ ಚೀನಾ ಭಾರತದ ವಾಯುಗಡಿ ಉಲ್ಲಂಘನೆ ಮಾಡಿರಿಉವ ಬಗ್ಗೆ ವರದಿ ಪ್ರಕಟವಾಗಿದೆ. ಉತ್ತರಾಖಂಡ್ ನ ಚಿಮೋಲಿ ಜಿಲ್ಲೆಯಲ್ಲಿ ಚೀನಾ ಹೆಲಿಕಾಫ್ಟರ್ ಗಳು ವಾಯುಗಡಿ ಉಲ್ಲಂಘನೆ ಮಾಡಿದೆ ಎಂದು ತಿಳಿದುಬಂದಿದೆ. 
ಜೂ.೦3 ರಂದು ಬೆಳಿಗ್ಗೆ ಚಿಮೋಲಿಯಲ್ಲಿ ಚೀನಾದ ಹೆಲಿಕಾಫ್ಟರ್ ಗಳ ಹಾರಾಟ ಕಂಡುಬಂದಿದ್ದು, ಚಿಮೋಲಿಯ (ಎಸ್ ಪಿ) ತ್ರಿಪಾಟಿ ಭಟ್ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, 3-5 ನಿಮಿಷಗಳ ಕಾಲ ಚೀನಾ ಭಾರತದ ವಾಯುಗಡಿಯನ್ನು ಉಲ್ಲಂಘನೆ ಮಾಡಿ ಹಾರಾಟ ನಡೆಸಿದೆ ಎಂದು ಹೇಳಿದ್ದಾರೆ.
ಚೀನಾದ ಹೆಲಿಕಾಫ್ಟರ್ ಗಳು ಉದ್ದೇಶಪೂರ್ವಕವಾಗಿ ಅಥವಾ ಅನುದ್ದೇಶಿತವಾಗಿ ವಾಯುಗಡಿ ಉಲ್ಲಂಘಿಸಿರಬಹುದು ಏನೇ ಇದ್ದರೂ ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಎಸ್ ಪಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com