ಸಿವಿಲ್ ಸರ್ವಿಸಸ್ ಟಾಪರ್ ನಂದಿನಿಗೆ ಶೇಕಡಾ 55.3 ಅಂಕಗಳು!

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲು ಕೇಂದ್ರ ಲೋಕ...
2016ರ ಐಎಎಸ್ ಟಾಪರ್ ಕನ್ನಡತಿ ನಂದಿನಿ ಕೆ.ಆರ್
2016ರ ಐಎಎಸ್ ಟಾಪರ್ ಕನ್ನಡತಿ ನಂದಿನಿ ಕೆ.ಆರ್
Updated on
ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲು ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಈ ವರ್ಷ ಮೊದಲಿಗರಾಗಿ ಹೊರಹೊಮ್ಮಿದ ಕನ್ನಡತಿ ನಂದಿನಿ ಕೆ.ಆರ್ ಅವರಿಗೆ ಶೇಕಡಾ 55.3 ಅಂಕ ದೊರಕಿದೆ. ಅಂದರೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಎಷ್ಟು ಕಠಿಣ ನಿಲುವು ತಳೆಯಲಾಗುತ್ತದೆ ಎಂಬುದನ್ನು ತೋರಿಸುತ್ತದೆ. 
2016ನೇ ಸಾಲಿನ ನಾಗರಿಕ ಸೇವೆಗಳಿಗಾಗಿ ನಡೆಸಿದ ಪರೀಕ್ಷೆಯ ಯಶಸ್ವಿ ಅಭ್ಯರ್ಥಿಗಳ ಅಂಕಗಳನ್ನು ಕೇಂದ್ರ ಲೋಕ ಸೇವಾ ಆಯೋಗ ಪ್ರಕಟಿಸಿದೆ. 
ನಾಗರಿಕ ಸೇವೆಗಳಿಗೆ ಯುಪಿಎಸ್ ಸಿ ವರ್ಷದಲ್ಲಿ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸುತ್ತದೆ. ಪ್ರಾಥಮಿಕ, ಮುಖ್ಯ ಮತ್ತು ಸಂದರ್ಶನ. ಇಲ್ಲಿ ತೇರ್ಗಡೆಯಾದವರನ್ನು ಭಾರತೀಯ ಆಡಳಿತ ಸೇವೆ(ಐಎಎಸ್), ಭಾರತೀಯ ವಿದೇಶಿ ಸೇವೆ(ಐಎಫ್ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಗಳಿಗೆ ನೇಮಕ ಮಾಡಲಾಗುತ್ತದೆ.
ಭಾರತೀಯ ಆದಾಯ ತೆರಿಗೆ (ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್) ನಲ್ಲಿ ಅಧಿಕಾರಿಯಾಗಿರುವ ನಂದಿನಿ ಈ ಬಾರಿ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಫಲಿತಾಂಶ ಕಳೆದ ತಿಂಗಳು 31ರಂದು ಪ್ರಕಟಗೊಂಡಿತ್ತು.  
ಒಟ್ಟು 2,025 ಅಂಕಗಳಲ್ಲಿ ನಂದಿನಿಯವರು 1,120 (927 ಮುಖ್ಯ ಪರೀಕ್ಷೆ ಮತ್ತು 193 ಸಂದರ್ಶನ) ಅಂಕಗಳನ್ನು ಗಳಿಸುವ ಮೂಲಕ ಶೇಕಡಾ 55.3 ಗಳಿಸಿದ್ದಾರೆ. ಎರಡನೇ ರ್ಯಾಂಕ್ ಗಳಿಸಿದ ಅನ್ಮೋಲ್ ಶೆರ್ ಸಿಂಗ್ ಬೇಡಿ 1,105 ಅಂಕಗಳು(ಶೇಕಡಾ 54.56), ಮೂರನೇ ರ್ಯಾಂಕ್ ಗಳಿಸಿದ ಗೋಪಾಲಕೃಷ್ಣ ರೊನಂಕಿ 1,101(ಶೇಕಡಾ 54.37) ಅಂಕಗಳನ್ನು ಪಡೆದಿದ್ದಾರೆ ಎಂದು ಯುಪಿಎಸ್ ಸಿ ತಿಳಿಸಿದೆ.
ಕಳೆದ ಸಾಲಿನಲ್ಲಿ ಒಟ್ಟು 1,099 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 500 ಅಭ್ಯರ್ಥಿಗಳು ಸಾಮಾನ್ಯ ವಿಭಾಗ, 347 ಇತರ ಹಿಂದುಳಿದ ವರ್ಗಗಳು, 163 ಪರಿಶಿಷ್ಠ ಜಾತಿ ಮತ್ತು 89 ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದಾರೆ. ಇನ್ನು 2015ರಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಟೀನಾ ದಾಬಿ 1,63 ಅಂಕಗಳನ್ನು(ಶೇಕಡಾ 52.49) ಗಳಿಸಿದ್ದರು.
ಉನ್ನತ ರ್ಯಾಂಕ್ ಗಳಿಸಿದ ಅಭ್ಯರ್ಥಿಗಳಲ್ಲಿ ಕೊನೆಯವರು ಅಭಿಶೇಕ್  ಶ್ರೀವಾಸ್ತವ. ಅವರಿಗೆ 1,099 ಅಂಕಗಳು ದೊರಕಿವೆ. ಅವರಿಗೆ ಒಟ್ಟು 817 ಅಂದರೆ ಶೇಕಡಾ 40.34 ಅಂಕಗಳು ಲಭಿಸಿವೆ. ಇವರಿಗೆಲ್ಲಾ ಕೇಂದ್ರ ಸರ್ಕಾರಿ ಸೇವೆಗಳು ದೊರಕಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com