ಇತಿಹಾಸ ಪುಟಕ್ಕೆ ಯುಜಿಸಿ, ಎಐಸಿಟಿಇ: ಹೀರಾ ರಚನೆಗೆ ಕೇಂದ್ರ ಸರ್ಕಾರ ಮುಂದು

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ತಾಂತ್ರಿಕ ಶಿಕ್ಷಣ ಅಖಿಲ ಭಾರತ ಮಂಡಳಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ತಾಂತ್ರಿಕ ಶಿಕ್ಷಣ ಅಖಿಲ ಭಾರತ ಮಂಡಳಿ (ಎಐಸಿಟಿಇ) ಇತಿಹಾಸ ಪುಟ ಸೇರಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವುಗಳನ್ನು ಬದಲಿಸಿ ಏಕ ಉನ್ನತ ಶಿಕ್ಷಣ ಸಬಲೀಕರಣ ನಿಯಂತ್ರಣ ಏಜೆನ್ಸಿ (ಹೀರಾ - HEERA) ರಚಿಸಲು ಮುಂದಾಗಿದೆ.
ಉನ್ನತ ಶಿಕ್ಷಣ ಸಬಲೀಕರಣ ನಿಯಂತ್ರಣ ಸಂಸ್ಥೆಯ ಉದ್ದೇಶ ನ್ಯಾಯವ್ಯಾಪ್ತಿಯಲ್ಲಿ ಅತಿಕ್ರಮಣಗಳನ್ನು ತೆಗೆದುಹಾಕುವುದು ಮತ್ತು ಅಸಂಬದ್ಧ ನಿಯಂತ್ರಕ ನಿಬಂಧನೆಗಳನ್ನು ತೆಗೆದುಹಾಕುವುದಾಗಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀತಿ ಆಯೋಗದ ಜೊತೆ ಸೇರಿ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳನ್ನು ಒಂದೇ ಸೂರಿನಡಿ ತರಲು ಯೋಜನೆ ರೂಪಿಸುತ್ತಿದೆ.
ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಸಭೆ ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದಿತ್ತು. ಅದರಲ್ಲಿ ಈ ಮಹತ್ವದ ಬದಲಾವಣೆ ತರಲು ನಿರ್ಧರಿಸಲಾಯಿತು.
ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಉದ್ದೇಶಿತ ನಿಯಂತ್ರಕಕ್ಕೆ ನೀಲನಕ್ಷೆ ತಯಾರಿಸಲಾಗಿದ್ದು ಶಾಸನವನ್ನು ಜಾರಿಗೆ ತರಲು ಮಾತುಕತೆ ನಡೆಯುತ್ತಿದೆ.
ಆದರೂ ಏಕಮಾತ್ರ ಉನ್ನತ ಶಿಕ್ಷಣ ಪ್ರಾಧಿಕಾರ ಹೊಸದೇನಲ್ಲ. ಸರ್ಕಾರ ರಚಿಸಿದ ಅನೇಕ ಸಮಿತಿಗಳ ಶಿಫಾರಸಿನ ಆಧಾರದ ಮೇಲೆ ನಿಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com