ಪೊಲೀಸರ ಗುಂಡೇಟಿನಿಂದಲೇ ರೈತರ ಸಾವು : ಮಧ್ಯ ಪ್ರದೇಶ ಗೃಹಸಚಿವ

ಮಂಡ್ ಸರ್ ನಡೆದ ಪ್ರತಿಭಟನೆ ವೇಳೆ ಪೊಲೀಸರ ಫೈರಿಂಗ್ ಗೆ ಐವರು ರೈತರು ಬಲಿಯಾಗಿರುವುದು ನಿಜ ಎಂದು ಮಧ್ಯ ಪ್ರದೇಶ ಗೃಹ ಸಚಿವ ಭೂಪೇಂದ್ರ ಸಿಂಗ್ ..
ರೈತರ ಆಕ್ರೋಶಕ್ಕೆ ಬಲಿಯಾಗಿರುವ ಬಸ್ ಗಳು
ರೈತರ ಆಕ್ರೋಶಕ್ಕೆ ಬಲಿಯಾಗಿರುವ ಬಸ್ ಗಳು
ಭೂಪಾಲ್: ಮಂಡ್ ಸರ್ ನಡೆದ ಪ್ರತಿಭಟನೆ ವೇಳೆ ಪೊಲೀಸರ ಫೈರಿಂಗ್ ಗೆ ಐವರು ರೈತರು ಬಲಿಯಾಗಿರುವುದು ನಿಜ ಎಂದು ಮಧ್ಯ ಪ್ರದೇಶ ಗೃಹ ಸಚಿವ ಭೂಪೇಂದ್ರ ಸಿಂಗ್ ಹೇಳಿದ್ದಾರೆ.
ಗುರುವಾರ ಪಿಟಿಐ ಸುದ್ದಿ ಸಂಸ್ಥೆಗೆ ದೂರವಾಣಿ ಮೂಲಕ ಮಾತನಾಡಿದ ಭೂಪೇಂದ್ರ ಸಿಂಗ್ ಪೊಲೀಸ್ ಫೈರಿಂಗ್ ವೇಳೆ ಐದು ಮಂದಿ ರೈತರು ಸಾವನ್ನಪ್ಪಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ರೈತರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪಿಪ್ಪಿಲಮಂಡಿ ಇನ್ಸ್ ಪೆಕ್ಟರ್  ಅನಿಲ್ ಸಿಂಗ್ ಟಾಕೂರ್ ಅವರನ್ನು ಕರ್ತವ್ಯದಿಂದ ತೆಗೆದು ಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿನಿಂದ ಐವರು ರೈತರು ಸಾವನ್ನಪ್ಪಿದ್ದಾರೆ ಎಂದು ಸಚಿವರು ನೀಡಿರುವ ಹೇಳಿಕೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.
ಘಟನೆ ನಡೆದ ಕೆಲ ನಿಮಿಷಗಳಲ್ಲಿ ಪಿಟಿಐ ಜೊತೆ ಮಾತನಾಡಿದ್ದ ಮಂಡ್ಸೂರ್ ಕಲೆಕ್ಟರ್, ಪೊಲೀಸರು ಪೈರಿಂಗ್ ಮಾಡುವ ಯಾವುದೇ ಆದೇಶ ಪಡೆದಿರಲಿಲ್ಲ ಎಂದು ಹೇಳಿದ್ದರು.
ಫೈರಿಂಗ್ ಮಾಡುವಂತೆ ಪೊಲೀಸರಿಗೆ ಯಾರು ಪ್ರಚೋದನೆ ನೀಡಿದರು ಎಂಬ ಪ್ರಶ್ನೆಗೆ ಉತ್ತಿರಿಸಿದ ಗೃಹ ಸಚಿವರು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಅದರ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಈಗ ಶಾಂತವಾಗಿದ್ದು, ಉದ್ವಿಘ್ನಗೊಂಡಿದ್ದ ಮಂಡ್ ಸೂರ್ ನಲ್ಲಿ  ಕ್ಷಿಪ್ರ ರಕ್ಷಣಾ ಪಡೆಯನ್ನು ನಿಯೋಜಿಸಲಾಗಿದೆ, ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com