ಸಾಂದರ್ಭಿಕ ಚಿತ್ರ
ದೇಶ
ಸಹರನಾಪುರ ಹಿಂಸಾಚಾರ: ಮಾಸ್ಟರ್ ಮೈಂಡ್ ಚಂದ್ರಶೇಖರ್ ಬಂಧನ
ಸಹರನಾಪುರ ಹಿಂಸಾಚಾರ ಪ್ರಕರಣದ ಮಾಸ್ಟರ್ ಮೈಂಡ್ ಹಾಗೂ ಭಿಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಎಂಬಾತನನ್ನು ಪೊಲೀಸರು ಹಿಮಾಚಲ ಪ್ರದೇಶದಲ್ಲಿ ...
ಲಕ್ನೋ: ಸಹರನಾಪುರ ಹಿಂಸಾಚಾರ ಪ್ರಕರಣದ ಮಾಸ್ಟರ್ ಮೈಂಡ್ ಹಾಗೂ ಭಿಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಎಂಬಾತನನ್ನು ಪೊಲೀಸರು ಹಿಮಾಚಲ ಪ್ರದೇಶದಲ್ಲಿ ಬಂಧಿಸಿದ್ದಾರೆ.
30 ವರ್ಷದ ಚಂದ್ರಶೇಖರ್ ನಲ್ಲಿ ಹಿಮಾಚಲ ಪ್ರದೇಶದ ದಲ್ ಹೌಸಿಯಲ್ಲಿ ಬಂಧಿಸಿರುವುದಾಗಿ ಮೀರತ್ ವಲಯದ ಡಿಜಿ ಆನಂದ್ ಕುಮಾರ್ ಹೇಳಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ಶೀಘ್ರವೇ ಸಹರಾನಪುರಕ್ಕೆ ಕರೆತರಲಾಗುವುದು.
ಈ ಹಿಂದೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಮ್ ಆರ್ಮಿಯ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದರು. ಈ ಇಬ್ಬರು ಮೇ 9 ರಂದು ರಾಮನಗರದಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಭಾಹವಹಿಸಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ದಲಿತರ ನಡುವೆ ನಡೆದ ಗಲಭೆಯಲ್ಲಿ ಓರ್ವ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು.
ಚಂದ್ರಶೇಖರ್ ನನ್ನು ಹುಡುಕಿಕೊಟ್ಟವರಿಗೆ 12 ಸಾವಿರ ರು ಹಣ ನೀಡುವುದಾಗಿ ಘೋಷಿಸಲಾಗಿತ್ತು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ