ಜಮ್ಮು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ 3 ವರ್ಷ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಮೋದಿ ಫೆಸ್ಟಿವಲ್ ಆಯೋಜಿಸುವುದಾಗಿ ಮಾಹಿತ ಮತ್ತು ತಂತ್ರಜ್ಞಾನ ಇಲಾಖೆ ತಿಳಿಸಿದೆ.
ಜಮ್ಮುವಿನ ಸತ್ವಾರಿಯಲ್ಲಿ ಮೂರು ದಿನಗಳ ಕಾಲ ಮೋದಿ ಹಬ್ಬ ಆಯೋಜಿಸುವುದಾಗಿ ಹೇಳಿದೆ. ಜಮ್ಮು ಕಾಶ್ಮೀರ ವಿಧಾನ ಸಭೆ ಸ್ಪೀಕರ್ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಲಾಗುವುದು.
ಉಜಾಲಾ ಎಲ್ ಇಡಿ ಲೈಟ್ಸ್, ಮೋದಿ ಫೆಸ್ಟ್ ಅಂಗವಾಗಿ ಲಕ್ಕಿ ಡ್ರಾ ಕೂಪನ್ ಭರ್ತಿ ಮಾಡುವುದು, ಜನ್ ಕೀ ಬಾತ್ ಗಾಗಿ ಫೋನ್ ಸಂಖ್ಯೆ ನೋಂದಾಯಿಸುವುದು, ಬಿಮ್ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು.